ಆರ್. ಎಸ್.‌ ಎಸ್.‌ ಕಾರ್ಯಕರ್ತ ರಾಜು ಹತ್ಯೆಗೆ ೯ ವರ್ಷ: ಮಸೀದಿ ಬೀಗ ತೆಗೆಯುವ ಬಗ್ಗೆ ಡಿಸಿ ನೇತೃತ್ವದಲ್ಲಿ  ನಾಳೆ ಸಭೆ.

On the evening of March 13, 2016, two miscreants killed RSS worker Raju in broad daylight near Vinayaka Tea Shop on M.G. Road under Udayagiri police station limits and fled on a bike. This threatened the law and order situation in Mysore city. Sensing the seriousness of the case, the police had formed four teams of CCB to investigate the case.

ಉಪಪೊಲೀಸ್ ಆಯುಕ್ತ ಎಂ. ಮುತ್ತುರಾಜು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು & ಚಾಮುಂಡಿ ಕಾಮಾಂಡೋ ಪಡೆಯೊಂದಿಗೆ ಉದಯಗಿರಿ ಪೊಲೀಸ್ ಠಾಣಾ ಸರದ್ದಿನ ಕ್ಯಾತಮಾರನಹಳ್ಳಿ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿ ನೆಲೆಸಲು & ಕಾನೂನು ಸುವ್ಯವಸ್ಥೆ ಕಾಪಾಡಲು ಬುಧವಾರ ರೂಟ್ ಮಾರ್ಚ್ ನಡೆಸಿದರು.

ಮೈಸೂರು, ಮಾ.೧೩,೨೦೨೫:  ನಗರದ ಕ್ಯಾತಮಾತರಮಹಳ್ಳಿ ನಿವಾಸಿ, ಆರ್.ಎಸ್.ಎಸ್.‌ ಕಾರ್ಯಕರ್ತ ರಾಜು ಹತ್ಯೆಯಾಗಿ ಇಂದಿಗೆ ಒಂಬತ್ತು ವರ್ಷ.

2016 ರ ಮಾರ್ಚ್ 13ರಂದು ಸಂಜೆ ಉದಯಗಿರಿ ಠಾಣಾ ವ್ಯಾಪ್ತಿಯ ಎಂ.ಜಿ.ರಸ್ತೆಯಲ್ಲಿರುವ ವಿನಾಯಕ ಟೀ ಅಂಗಡಿ ಬಳಿ ಇಬ್ಬರು ದುಷ್ಕರ್ಮಿಗಳು ಆರ್‌ಎಸ್‌ಎಸ್ ಕಾರ್ಯಕರ್ತ ರಾಜುವನ್ನು ಹಾಡಹಗಲೇ ಮಚ್ಚಿನಿಂದ ಕೊಲೆ ಮಾಡಿ, ಬೈಕ್‌ನಲ್ಲಿ ಪರಾರಿಯಾಗಿದ್ದರು. ಇದು ಮೈಸೂರು ನಗರದಲ್ಲಿನ ಶಾಂತಿ ಸುವ್ಯವಸ್ಥೆಗೆ ಗಂಡಾಂತರ ತಂದಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆರೋಪಿಗಳ ಪತ್ತೆಯ ತನಿಖೆಗೆ ಸಿಸಿಬಿಯ 4 ತಂಡಗಳನ್ನು ರಚಿಸಿತ್ತು.

ಕೆಲ ದಿನಗಳ ಬಳಿಕ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಶಾಂತಿನಗರದ ನಿವಾಸಿ, ಕೆಎಫ್‌ಡಿ ಕಾರ್ಯಕರ್ತ ಅಬೀದ್ ಪಾಷ ಅಲಿಯಾಸ್ ಬೈಯ್ಯ ಅಲಿಯಾಸ್ ಇಬ್ರಾಹಿಂ ಅಲಿಯಾಸ್ ಉಸ್ಮಾನ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಮಸೀದಿಗೆ ಹಂದಿ ತಲೆ ಹಾಕಿದ್ದು ಹಾಗೂ ಮಸೀದಿ ಕಟ್ಟುವ ವಿಚಾರದಲ್ಲಿ ರಾಜು ತಕರಾರು ತೆಗೆಯುತ್ತಿದ್ದರು. ಜೋಡಿ ಕೊಲೆ ಪ್ರಕರಣದಲ್ಲಿ ನನ್ನ ವಿರುದ್ಧ ರಾಜು ಸಾಕ್ಷ್ಯ ಹೇಳಿದ್ದರು. ಈ ಕಾರಣಕ್ಕಾಗಿ ನನ್ನ ಸಹಚರರ ಜತೆಗೂಡಿ ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ  ಆರೋಪಿ ಅಬೀದ್ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ರಾಜಕೀಯ ತಿರುವು:

ರಾಜು ಹತ್ಯೆ ಘಟನೆ ಖಂಡಿಸಿ ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ಘಟಾನುಘಟಿ ನಾಯಕರು ರೋಡಿಗಿಳಿದಿದ್ದರು. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ, ರ್ಯಾಲಿಗಳನ್ನು ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರೇ ಖುದ್ದು ರಾಜು ನಿವಾಸಕ್ಕೆ ಭೇಟಿ ನೀಡಿದ್ದರು.

ನಾಳೆ ಸಭೆ:

ರಾಜು ಹತ್ಯೆ ಘಟನೆ ಬಳಿಕ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ  ಗಾಯತ್ರಿಪುರಂ ಎರಡನೇ ಹಂತ ಕ್ಯಾತಮಾರನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮಸೀದಿಗೆ ಬೀಗ ಹಾಕಲಾಗಿತ್ತು.

ಬಳಿಕ Aleema Sadlys Education institution & Masjid-E-Siddique-E-Akbar Trust ಬೀಗ ಹಾಕಿರುವುದನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯ, ಮಸೀದಿಗೆ ಬೀಗ ಹಾಕಿರುವುದನ್ನು ಮುಂದುವರಿಸುವ  ಅಥವಾ ಸದರಿ ಟ್ರಸ್ಟ್ ಬೀಗ ತೆರೆದು ಕಾರ್ಯ ಪರಾಮರ್ಶಿಸಲು ಆಸಕ್ತ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳ  ಅಭಿಪ್ರಾಯ ಪಡೆಯಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಈ ಸಂಬಂಧ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಸೋಮವಾರ ಕರೆದಿದ್ದ ಸಭೆ  ಕಾರಾಣಾಂತರಗಳಿಂದ ನಡೆಯಲಿಲ್ಲ. ಬದಲಿಗೆ ಸಭೆಯನ್ನು ನಾಳೆಗೆ (ಮಾ. 14 ಕ್ಕೆ ) ಮುಂದೂಡಲಾಗಿದೆ.

ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ  ನಡೆದು ದಶಕದ ಬಳಿಕ ಮತ್ತೆ ಈಗ ಮಸೀದಿಗೆ ಬೀಗ ಹಾಕಿರುವ ವಿಷಯ ಮುನ್ನಲೆಗೆ ಬಂದಿದೆ.

ಈ ಘಟನೆ ಬಳಿಕ ವಿವಾದಿತ ಮಸೀದಿಗೆ ಬೀಗ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್  ಪರವಾಗಿ ಮುನಾವರ್ ಪಾಶ ಕೋರ್ಟ್ ಮೊರೆ ಹೋಗಿದ್ದರು. (WRIT PETITION NO. 49775 OF 2019 (GM-POLICE). ಇದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಪ್ರಕರಣವನ್ನು ಸ್ಥಳೀಯಮಟ್ಟದಲ್ಲೇ ಮಾತುಕತೆ ನಡೆಸಿ 12 ವಾರಗಳಲ್ಲಿ ಇತ್ಯರ್ಥ ಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಕೋರ್ಟ್ ನಿರ್ದೇಶನ ನೀಡಿತು.

key words: RSS activist, Raju’s murder, completes 9 years, Mysore, police

SUMMARY:

ಉಪಪೊಲೀಸ್ ಆಯುಕ್ತ ಎಂ. ಮುತ್ತುರಾಜು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು & ಚಾಮುಂಡಿ ಕಾಮಾಂಡೋ ಪಡೆಯೊಂದಿಗೆ ಉದಯಗಿರಿ ಪೊಲೀಸ್ ಠಾಣಾ ಸರದ್ದಿನ ಕ್ಯಾತಮಾರನಹಳ್ಳಿ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿ ನೆಲೆಸಲು & ಕಾನೂನು ಸುವ್ಯವಸ್ಥೆ ಕಾಪಾಡಲು ಬುಧವಾರ ರೂಟ್ ಮಾರ್ಚ್ ನಡೆಸಿದರು.

RSS activist Raju’s murder completes 9 years: DC to chair meeting tomorrow to discuss mosque lock issue