ತುಮಕೂರು,ಅಕ್ಟೋಬರ್,8,2022(www.justkannada.in): ಆರ್.ಎಸ್ ಎಸ್ ಮತ್ತು ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಭಾರತವನ್ನು ಒಡೆಯುತ್ತಿರುವುದು ಬಿಜೆಪಿ, ಆರ್ಎಸ್ಎಸ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ,ಐಕ್ಯತಾ ಯಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಾರೆ. ನಾನು ಕೆಲಸದಲ್ಲಿ ನಂಬಿಕೆ ಇಟ್ಟವನು ಜನರ ನಡುವೆ ಓಡಾಡುವಾಗ ಅವರ ಕಷ್ಟ ನೋವು ಅರ್ಥ ಆಗುತ್ತೆ ಭಾರತ್ ಜೋಡೋ ಯಾತ್ರೆಯಲ್ಲಿ ಒಳ್ಳೆಯ ಅನುಭವವಾಗುತ್ತಿದೆ. ಕಾಂಗ್ರಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಎಂದರು.
ಆರ್ ಎಸ್ ಎಸ್ ನವರು ಬ್ರೀಟಿಷರಿಗೆ ಸಹಾಯ ಮಾಡುತ್ತಿದ್ದರು. ಬ್ರಿಟೀಷರಿಂದ ಸಾವರ್ಕರ್ ಸ್ಟೇಫಂಡ್ ಪಡೆಯುತ್ತಿದ್ದರು. ಬಿಜೆಪಿ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ. ಯುವಕರು ನಿರುದ್ಯೋಗದಿಂದ ಬೇಸತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ಸಿಗರು ಸೇರಿದಂತೆ ಹಲವರ ಬಲಿದಾನವಾಗಿದೆ. ಸಾವರ್ಕರ್ ಸೇರಿದಂತೆ ಹಲವರು ಬ್ರಿಟಿಷರ ಜೊತೆ ನಿಂತಿದ್ದರು. ದೇಶದಲ್ಲಿ ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ ಮಾಡಿದವರು ನಾವು. ಆದರೆ ಬಿಜೆಪಿ ಜನರ ನಡುವೆ ದ್ವೇಷ ಬಿತ್ತಿ ದೇಶ ಒಡೆಯುತ್ತಿದೆ. ಅದನ್ನು ಸರಿಪಡಿಸಲು ನಾವು ಐಕ್ಯತಾ ಯಾತ್ರೆ ಮಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ರಾಜ್ಯದಲ್ಲಿ 40% ಸರ್ಕಾರದಿಂದ ಜನರ ಕಷ್ಟ ಅನುಭವಿಸುತ್ತಿದ್ದಾರೆ. ರೈತರು, ಬಡವರು, ನಿರುದ್ಯೋಗಿಗಳ ಕಷ್ಟ ಕೇಳುವವರೇ ಇಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಭಾರತೀಯ ಜನತಾ ಪಕ್ಷ ಕೋಟಿ ಕೋಟಿ ಹಣ ಖರ್ಚು ಮಾಡ್ತಿದೆ. ಬಿಜೆಪಿ ನನ್ನನ್ನು ನಿರಂತರವಾಗಿ ಹೀಯಾಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ, ವಿಶ್ವಾಸವಿಲ್ಲ. ಬಿಜೆಪಿಯವರಿಗೆ ಪ್ರಶ್ನೆ ಕೇಳಲು ಪತ್ರಕರ್ತರಿಗೆ ಅವಕಾಶ ನೀಡಲ್ಲ. ನರೇಂದ್ರ ಮೋದಿ ಈವರೆಗೆ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ ಎಂದರು.
ದೇಶಾದ್ಯಂತ ಪಿಎಫ್ ಐ ಬ್ಯಾನ್ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ದ್ವೇಷ ಸಾಧಿಸುವ ವ್ಯಕ್ತಿ ಸಂಘಟನೆಯನ್ನ ಕಾಂಗ್ರೆಸ್ ಬೆಂಬಲಿಸಲ್ಲ. ಸಮಾಜದಲ್ಲಿ ಶಾಂತಿ ಕದಡುವವರು ಯಾರೇ ಇದ್ದರೂ ಸಹಿಸಲ್ಲ. ಅವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
Key words: RSS – BJP – dividing – country-congress-leader-Rahul Gandhi