ಬೆಂಗಳೂರು, ಮೇ 31, 2020 (www.justkannada.in): ದೇಶದ ಪ್ರಮುಖ ಸ್ವಾಮೀಜಿಗಳ ಜೊತೆ ಆರ್ಎಸ್ಎಸ್ ಮುಖಂಡರ ವಿಡಿಯೋ ಸಂವಾದ ಇಂದು ನಡೆಯಿತು.
ಆರ್ಎಸ್ಎಸ್ ಸರ ಸಂಚಾಲಕರಾದ ಮೋಹನ್ ಭಾಗವತ್ ಮತ್ತು ಸಹ ಕಾರ್ಯವಾಹ ಸುರೇಶ್ ಭಯ್ಯಾಜಿ ಅವರು ಹಿಂದೂ ಧರ್ಮ ಆಚಾರ್ಯ ಮಹಾಸಭಾ ಜೊತೆಯಲ್ಲಿ ಋಷಿ, ಕೃಷಿ ಹಾಗೂ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸ್ವಾಮೀಜಿಗಳ ಜತೆ ವಿಡಿಯೋ ಸಂವಾದ ನಡೆಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಅವಧೇಶಾನಂದ ಸ್ವಾಮೀಜಿ, ಶ್ರೀ ಪರಮಾನಂದ ಸ್ವಾಮೀಜಿ ಮತ್ತು ಯೋಗ ಗುರು ಶ್ರೀ ಬಾಬಾ ರಾಮï ದೇವ್ ಅವರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಕೊರೋನಾ ವೈರಾಣುವಿನ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಸಂವಾದ ನಡೆಸಿದ ಸ್ವಾಮೀಜಿಗಳು ಹಾಗೂ ಆರ್ಎಸ್ಎಸ್ ಮುಖಂಡರು, ಈ ರೋಗ ನಿಯಂತ್ರಿಸುವ ಪರಿಹಾರಗಳ ಕುರಿತು ಸಮಾಲೋಚನೆ ನಡೆಸಿದರು. ಕೊರೋನಾ ಹಿನ್ನೆಯಲ್ಲಿ ದೇಶದ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು.