BIG EXCLUSIVE: ಕ್ಯಾತಮಾರನಹಳ್ಳಿ ರಾಜು ಹತ್ಯೆ : ಘಟನೆ ನಡೆದು 9 ವರ್ಷಗಳ ಬಳಿಕ ಮತ್ತೆ ಮುನ್ನಲೆಗೆ ವಿವಾದಿತ ಮಸೀದಿ..!

ಮೈಸೂರು, ಮಾ.10,2025 : ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ  ಗಾಯತ್ರಿಪುರಂ ಎರಡನೇ ಹಂತ ಕ್ಯಾತಮಾರನಹಳ್ಳಿ ಮುಖ್ಯ ರಸ್ತೆಯಲ್ಲಿರುವ  Aleema Sadlys Education institution & Masjid-E-Siddique-E-Akbar Trust ಬೇಗ ಹಾಕಿರುವುದನ್ನು ಮುಂದುವರಿಸುವ  ಅಥವಾ ಸದರಿ ಟ್ರಸ್ಟ್ ಬೀಗ ತೆರೆದು ಕಾರ್ಯ ಪರಾಮರ್ಶಿಸಲು ಆಸಕ್ತ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳ  ಅಭಿಪ್ರಾಯ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

ಈ ಸಂಬಂಧ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಇಂದು ಸಭೆ ಕರೆದಿದ್ದರು. ಆದರೆ ಕಾರಣಾಂತರಗಳಿಂದ ಇಂದು ಸಭೆ ನಡೆಯಲಿಲ್ಲ. ಬದಲಿಗೆ ಸಭೆಯನ್ನು ಮಾ. 14 ಕ್ಕೆ ಮುಂದೂಡಲಾಗಿದೆ.  ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ  ನಡೆದು ದಶಕದ ಬಳಿಕ ಮತ್ತೆ ಈ ಮಸೀದಿ ಈಗ ಮುನ್ನಲೆಗೆ ಬಂದಿದೆ.

ಏನಿದು ಘಟನೆ:

2016 ರ ಮಾರ್ಚ್ 13ರಂದು ಸಂಜೆ ಉದಯಗಿರಿ ಠಾಣಾ ವ್ಯಾಪ್ತಿಯ ಎಂ.ಜಿ.ರಸ್ತೆಯಲ್ಲಿರುವ ವಿನಾಯಕ ಟೀ ಅಂಗಡಿ ಬಳಿ ಇಬ್ಬರು ದುಷ್ಕರ್ಮಿಗಳು ಆರ್‌ಎಸ್‌ಎಸ್ ಕಾರ್ಯಕರ್ತ ರಾಜುವನ್ನು ಹಾಡಹಗಲೇ ಮಚ್ಚಿನಿಂದ ಕೊಲೆ ಮಾಡಿ, ಬೈಕ್‌ನಲ್ಲಿ ಪರಾರಿಯಾಗಿದ್ದರು. ತನಿಖೆಗೆ ಸಿಸಿಬಿಯ 4 ತಂಡಗಳನ್ನು ರಚಿಸಲಾಗಿತ್ತು.

ಕೆಲ ದಿನಗಳ ಬಳಿಕ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಶಾಂತಿನಗರದ ನಿವಾಸಿ, ಕೆಎಫ್‌ಡಿ ಕಾರ್ಯಕರ್ತ ಅಬೀದ್ ಪಾಷ ಅಲಿಯಾಸ್ ಬೈಯ್ಯ ಅಲಿಯಾಸ್ ಇಬ್ರಾಹಿಂ ಅಲಿಯಾಸ್ ಉಸ್ಮಾನ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.  ಮಸೀದಿಗೆ ಹಂದಿ ತಲೆ ಹಾಕಿದ್ದು ಹಾಗೂ ಮಸೀದಿ ಕಟ್ಟುವ ವಿಚಾರದಲ್ಲಿ ರಾಜು ತಕರಾರು ತೆಗೆಯುತ್ತಿದ್ದರು. ಜೋಡಿ ಕೊಲೆ ಪ್ರಕರಣದಲ್ಲಿ ನನ್ನ ವಿರುದ್ಧ ರಾಜು ಸಾಕ್ಷ್ಯ ಹೇಳಿದ್ದರು. ಈ ಕಾರಣಕ್ಕಾಗಿ ನನ್ನ ಸಹಚರರ ಜತೆಗೂಡಿ ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ  ಆರೋಪಿ ಅಬೀದ್ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ಈ ಘಟನೆ ಬಳಿಕ ವಿವಾದಿತ ಮಸೀದಿಗೆ ಬೀಗ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್  ಪರವಾಗಿ ಮುನಾವರ್ ಪಾಶ ಕೋರ್ಟ್ ಮೊರೆ ಹೋಗಿದ್ದರು. (WRIT PETITION NO. 49775 OF 2019 (GM-POLICE)  . ಇದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಪ್ರಕರಣವನ್ನು ಸ್ಥಳೀಯಮಟ್ಟದಲ್ಲೇ ಮಾತುಕತೆ ನಡೆಸಿ 12 ವಾರಗಳಲ್ಲಿ ಇತ್ಯರ್ಥ ಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಕೋರ್ಟ್ ನಿರ್ದೇಶನ ನೀಡಿತು.

ಇದೀಗ ಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆ ನಡೆಯದೆ ಅದನ್ನು ಮಾ. 14ಕ್ಕೆ ಮುಂದೂಡಲಾಯಿತು.

key words:  Kyathamaranahalli, RSS Raju ,murder, Controversial mosque, mysore, communal clash

SUMMARY: 

BIG EXCLUSIVE: Kyathamaranahalli Raju murder: Controversial mosque comes to the fore again 9 years after the incident..!