ಮೈಸೂರು,ಆಗಸ್ಟ್,9,2021(www.justkannada.in): ಸರ್ಕಾರಿ ಓಣಿಗೆ ಅಕ್ರಮವಾಗಿ (ಅವೈಜ್ಞಾನಿಕವಾಗಿ) ಬಿಡುತ್ತಿರುವ ಒಳಚರಂಡಿ ನೀರು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿಗೆ ಆರ್ ಟಿಐ ಕಾರ್ಯಕರ್ತ ಬಿಎನ್ ನಾಗೇಂದ್ರ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿರುವ ಬಿಎನ್ ನಾಗೇಂದ್ರ, ಮೈಸೂರು ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮೇಟಗಳ್ಳಿ ಗ್ರಾಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ರಚಿಸಿರುವ ಮೇಟಗಳ್ಳಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-5 ವ್ಯಾಪ್ತಿಗೆ ಸೇರಿದ ವಾರ್ಡ್ ನಂ7ರಲ್ಲಿ ಬರುವ ಒಳಚರಂಡಿಯಿಂದ ಮಲಮೂತ್ರ ವಿಸರ್ಜನೆ ಮಾಡಿದ ಹಾಗೂ ಇನ್ನಿತರೆ ತ್ಯಾಜ್ಯದ ನೀರು ಮೈಸೂರು ತಾಲ್ಲೂಕು, ಕಸಬಾ ಹೋಬಳಿಯ ಮೇಟಗಳ್ಳಿ ಗ್ರಾಮದ ಸರ್ವೆ ನಂಬರ್ 1, 2, 147, 160, 164, 165 ಮತ್ತು 177ರ ಹಾಗೂ ಇನ್ನಿತರ ಸರ್ವೆ ನಂಬರ್ಗಳಲ್ಲಿ ಇರುವ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಒಣಿಗೆ ಸೇರ್ಪಡೆ ಆಗಿರುತ್ತದೆ.
ಆದಾಗ್ಯೂ ಮೇಟಗಳ್ಳಿ ಗ್ರಾಮದ ಸರ್ವೆ ನಂಬರ್ 2ರಲ್ಲಿ ಸರ್ಕಾರಿ ಜಮೀನು ಆಗಿದ್ದು, ಇದರಲ್ಲಿ ಮೇಟಗಳ್ಳಿ ಗ್ರಾಮಸ್ಥರಿಗಾಗಿ ಸ್ಮಶಾನ (ರುದ್ರಭೂಮಿಯನ್ನು) ಸಹ ಮಾಡಲಾಗಿದೆ. ಹಾಗೂ ಇದೆ ವ್ಯಾಪ್ತಿಯಲ್ಲಿ ಮೇಟಗಳ್ಳಿ ಗ್ರಾಮದ ಆರಾದ್ಯ ದೇವರು ಶ್ರೀ ಮಹಲಿಂಗೇಶ್ವರ ದೇವಸ್ಥಾನವಿದ್ದು, ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು. ಮಹಾಲಿಂಗೇಶ್ವರ ದೇವಸ್ಥಾನವು ಪುರಾತನ ಕಾಲದ ದೇವಸ್ಥಾನವಾಗಿರುತ್ತದೆ. ಮಥುನಗರದಿಂದ ಬರುತ್ತಿರುವ ಒಳಚರಂಡಿ ಕಲ್ಮಷ ನೀರಿನಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿದ್ದು, ಈ ದೇವಸ್ಥಾನದಿಂದ ಮುಂದೆ ಮೇಟಗಳ್ಳಿ ಗ್ರಾಮಸ್ಥರ ಖಾಸಗಿ ಜಮೀನು ಇದ್ದು ಮುಂದೆ ಯಾವುದೇ ಒಳ ಚರಂಡಿ ನೀರು ಹರಿಯಲು ಯಾವುದೇ ಚರಂಡಿ ಇನ್ನಿತರೆ ವ್ಯವಸ್ಥೆ ಇರುವುದಿಲ್ಲದ್ದರಿಂದ ಬರುವ ನೀರು ದೇವಸ್ಥಾನದ (ಸನಿಹ) ಪಕ್ಕದಲ್ಲಿಯೇ ನೀಲ್ಲುತ್ತಿದೆ. ಇದರಿಂದಾಗಿ ಪುರಾತನ ಕಾಲದ ಸರ್ಕಾರಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಪವಿತ್ರತೆಗೆ ಧಕ್ಕೆಯಾಗುತ್ತಿದ್ದು, ಒಳಚರಂಡಿ ನೀರಿನ ಕೆಟ್ಟ ದುರ್ವಾಸನೆಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತೊದರೆಯಾಗುತ್ತಿದೆ.
ಸರ್ವೆ ನಂಬರ್ 1ರ ಪಕ್ಕದಲ್ಲಿ ನನ್ನ ಖಾಸಗಿ ನಿವೇಶನವಿದ್ದು, ಇದರಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆ ಬಾವಿ ಇದ್ದು, ಒಳಚರಂಡಿ ನೀರು ಕೊಳವೆ ಬಾವಿ ಪಕ್ಕದಲ್ಲಿಯೇ ಸರ್ಕಾರಿ ಒಣಿಗೆ ಬಿಟ್ಟಿರುವುದರಿಂದ ಕೊಳವೆ ಬಾವಿಗೆ ಸೇರುತ್ತಿದ್ದು, ಕೊಳವೆ ಬಾವಿಯ ಕುಡಿಯುವ ನೀರು ಸಹ ಮಲೀನವಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಿರುವ ಬಡಾವಣೆಯ ಒಳಚರಂಡಿ ನೀರನ್ನು ಯಾವುದೇ ಯೋಜನೆಯನ್ನು ರೂಪಿಸದೆ ಅವೈಜ್ಞಾನಿಕವಾಗಿ ಬಿಟ್ಟಿರುವುದನ್ನ ತಕ್ಷಣ ನಿಲ್ಲಿಸಿ ಪರ್ಯಾಯ ವ್ಯವಸ್ಥೆ ಮಾಡಿಸಿಕೊಡಬೇಕು.
ಹಾಗೆಯೇ ಪ್ರಸ್ತುತ ಕೋವಿಡ್ ರೋಗವಿದ್ದು ಇದರ ಜೊತೆಗೆ ಬೇರೆ ಯಾವುದೇ ಸಾಂಕ್ರಾಮಿಕ ರೋಗಗಳು ಅಕ್ಕ ಪಕ್ಕದ ಜನರಿಗೆ ಬಂದು ತೊಂದರೆಗೆ ಸಿಲುಕುವ ಮುನ್ನವೇ ಮೊದಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಯುಜಿಡಿ ನೀರನ್ನು ಓಪನ್ ಚರಂಡಿಗೆ ಬಿಟ್ಟಿರುವುದನ್ನು ನಿಲ್ಲಿಸಿಕೊಡಬೇಕೆಂದು ಬಿಎನ್ ನಾಗೇಂದ್ರ ಮನವಿ ಮಾಡಿದ್ದಾರೆ.
Key words: RTI -activist- appeals -Mysore DC – action -stop -unnecessary –drainage-water