ಶಿವಮೊಗ್ಗ,ಜನವರಿ,6,2022(www.justkannada.in): ರಾಜ್ಯ ಸರ್ಕಾರ ಜಾರಿಗೆ ಮುಂದಾಗಿರುವ ಕೋವಿಡ್ ನಿಯಮಗಳ ಬಗ್ಗೆ ಸಚಿವ ಕೆ.ಎಸ್ ಈಶ್ವರಪ್ಪ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು ಈ ಬಗ್ಗೆ ಮಾತನಾಡಿರುವ ಅವರು, ಬೇರೆ ಜಿಲ್ಲೆಗಳಿಗೆ ಕಠಿಣ ನಿಯಮ ಮಾಡೋದು ಬೇಡ. ಬೆಂಗಳೂರಿನಲ್ಲಿ ರೂಲ್ಸ್ ಮಾಡಿ ಬೇರೆ ಜಿಲ್ಲೆಗಳಿಗೆ ಬೇಡ. ಇದನ್ನೇ ಸಿಎಂ ಬೊಮ್ಮಾಯಿ ಜತೆ ನಾನು ಮಾತನಾಡುತ್ತೇನೆ. ಜನರ ಅಭಿಪ್ರಾಯ ವ್ಯಕ್ತಪಡಿಸಿತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಒಂದೇ ರೂಲ್ಸ್ ಇದೇ ಎಂದು ಯಾರು ಹೇಳಿದ್ದು..? ಯಾವ ಕರ್ಫ್ಯೂ ಇಲ್ಲ ಏನು ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡಗಾಡು ಇಲ್ಲ. ಜಿಲ್ಲೆಗಳಿಗೆ ಇನ್ನೂ ಆದೇಶ ಬಂದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ತಜ್ಞರ ಸಲಹೆಯಂತೆ ಮೊನ್ನೆ ನಿರ್ಧರವಾಗಿತ್ತು. ಇಂದು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತೇವೆ. ಯಾವ ಜಿಲ್ಲೆಗಳಲ್ಲಿ ಕೊರೋನಾ ಕಡಿಮೆ ಇದೆ ಅಲ್ಲಿ ಬೇಡ ಎಂದು ಹೇಳ್ತೇವೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಮಾಡ್ತೇವೆ. ಎಲ್ಲಿ ಸಮಸ್ಯೆ ಇಲ್ಲ ಅಲ್ಲಿ ತೆರವು ಮಾಡೋಣ ಅಂತಾ ಹೇಳ್ತೇವೆ ಎಂದರು.
ಸಚಿವ ಮುರುಗೇಶ್ ನಿರಾಣಿ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಶಿವಮೊಗ್ಗದ ವಿದ್ಯುತ್ ವಿಚಾರದ ಚರ್ಚೆ ಮಾಡಿದ್ವಿ. ಇದರಲ್ಲಿ ಬೇರೆ ಏನೂ ಇಲ್ಲ. ಈಗ ಸುನೀಲ್ ಕುಮಾರ್ ಬಂದಿದ್ದಾರೆ. ಅವರ ಜೊತೆಯೂ ಮಾತನಾಡ್ತೇನೆ ಎಂದರು.
ಪಾದಯಾತ್ರೆ ಮಾಡಿಯೇ ಸಿದ್ದ ಎಂಬ ಕಾಂಗ್ರೆಸ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ,ದೇವೇಗೌಡರು ನಮ್ಮ ಆಸ್ತಿ ಅವರು ಚೆನ್ನಾಗಿರಲಿ ಎಂದು ನಮ್ಮ ಭಾವನೆ. ಅದಕ್ಕೆ ಈಗ ಪಾದಯಾತ್ರೆ ಮಾಡಬೇಡಿ ಎಂದಿದ್ದೇವೆ. ಮಾಡೇ ಮಾಡ್ತೇವೆ ಅಂದ್ರೆ ಅವರಿಗೆ ಸೇರಿದ್ದು. ಮುಂದೆ ಅದರ ಬಗ್ಗೆ ನೋಡೋಣ ಎಂದರು.
Key words: Rules – Bangalore -not -other districts-Minister -KS Eshwarappa.