ನವದೆಹಲಿ,ಫೆಬ್ರವರಿ,25,2022(www.justkannada.in): ಉಕ್ರೇನ್ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಹೋರಾಟವನ್ನು ನಿಲ್ಲಿಸಿದರೆ, ರಷ್ಯಾ ಷರತ್ತುಬದ್ಧ ಮಾತುಕತೆಗೆ ಸಿದ್ಧವಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಉಕ್ರೇನ್ ವಶಪಡಿಸಿಕೊಳ್ಳುವ ಉದ್ಧೇಶ ನಮಗಿಲ್ಲ. ಆದರೆ ಉಕ್ರೇನ್ ಬೇರೆ ದೇಶಗಳ ವಶದಲ್ಲಿದೆ. ಅದನ್ನ ಬಂದ ಮುಕ್ತಗೊಳಿಸಿವುದು ನಮ್ಮ ಉದ್ಧೇಶ ಎಂದಿದ್ದಾರೆ.
ಹಾಗೆಯೇ ಉಕ್ರೇನ್ ಶಸ್ತ್ರಾಸ್ತ್ರವನ್ನು ತ್ಯಜಿಸಿ ಹೋರಾಟ ನಿಲ್ಲಿಸಿದರೆ ರಷ್ಯಾ ಮಾತುಕತೆಗೆ ಸಿದ್ಧವಿದೆ ಎಂದು ಆಹ್ವಾನ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇತ್ತ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಸಹ ರಷ್ಯಾ ಜೊತೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.
Key words: Russia -Ukraine -war