ಕೀವ್,ಮಾರ್ಚ್,9,2022(www.justkannada.in): ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದ್ದು, ಉಕ್ರೇನ್ನಲ್ಲಿ ಯುದ್ಧ ಭೀಕರತೆ ಹೆಚ್ಚುತ್ತಿದೆ. ಈ ಮಧ್ಯೆ ಮೂಲಭೂತ ಸೌಕರ್ಯಗಳು ಸಿಗದೆ 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
ತಾನಿಯಾ 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮರಿಯುಪೋಲ್ನಲ್ಲಿ ಆರು ವರ್ಷದ ಬಾಲಕಿ ತಾನಿಯಾ ಕುಡಿಯಲು ನೀರು ಸಿಗದೆ, ಡಿಹೈಡ್ರೇಶನ್ಗೆ ಒಳಗಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಇದಕ್ಕೂ ರಷ್ಯಾ ಸೇನೆ, ಅದು ನಡೆಸುತ್ತಿರುವ ದಾಳಿಯೇ ಕಾರಣ ಎಂದು ಉಕ್ರೇನ್ ಆಡಳಿತ ಹೇಳಿದೆ.
ರಷ್ಯಾದ ಆಕ್ರಮಣ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಮರಿಯುಪೋಲ್ ಕೂಡ ಒಂದು. ಅಲ್ಲಿನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆಗ ಈ ಪುಟ್ಟ ಬಾಲಕಿಯ ಅಮ್ಮ ಮೃತಪಟ್ಟಿದ್ದಾರೆ. ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಹುಡುಗಿ, ಡಿಹೈಡ್ರೇಶನ್ನಿಂದ ಸಾವನ್ನಪ್ಪಿದ್ದಾಳೆ ಎಂದು ಉಕ್ರೇನ್ ಆರೋಪಿಸಿದೆ.
key words: Russian-attack –Ukraine- Death – girl