ಹುಟ್ಟೂರಿಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಪಾರ್ಥೀವ ಶರೀರ: ಗ್ರಾಮಸ್ಥರಿಂದ ಅಂತಿಮ ನಮನ

 ಮಂಡ್ಯ,ಡಿಸೆಂಬರ್,11,2024 (www.justkannada.in): ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥೀವ ಶರೀರ ಆಗಮಿಸಿದ್ದು ಗ್ರಾಮಸ್ಥರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರ ತಲುಪಿದೆ. ನಿಗದಿಯಂತೆ ಸಾರ್ವಜನಿಕರ ದರ್ಶನದ ಬಳಿಕ ಹುಟ್ಟೂರಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಬೆಂಗಳೂರಿನಿಂದ ಹೊರಟ ಎಸ್.ಎಂ ಕೃಷ್ಣ ಅವರ ಅಂತಿಮಯಾತ್ರೆ 6 ಗಂಟೆಗಳ ಕಾಲ ನಡೆದು ಸೋಮನಹಳ್ಳಿಗೆ ಆಗಮಿಸಿದ್ದು ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸನಾತನ ಹಿಂದೂ ಧರ್ಮದಂತೆ ಅಂತಿಮ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದ್ದು  ಡಾ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತಿಮ ವಿಧವಿಧಾನ ನೆರವೇರಲಿದೆ.

Key words: Former CM, S.M. Krishna,  body, hometown