ಬೆಳಗಾವಿ,ಡಿಸೆಂಬರ್,10,2024 (www.justkannada.in): ವಯೋಸಹಜ ಕಾಯಿಲೆಯಿಂದ ಇಂದು ತಡರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಾಣ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮನವಿ ಮಾಡಿದರು.
ಬೆಳಗಾವಿಯ ಅಧಿವೇಶನದ ಕಲಾಪದಲ್ಲಿ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ವಿಧಾನಸೌಧದಲ್ಲಿ ಎಸ್‌ಎಂ ಕೃಷ್ಣ ಅವರ ಥಳಿ ನಿರ್ಮಾಣ ಆಗಬೇಕು. ಹಾಗೆಯೇ ಕೃಷ್ಣ ನೀರಾವರಿ ಯೋಜನೆ ಪ್ರದೇಶದಲ್ಲಿ ಅವರ ಸ್ಮಾರಕ ಆಗಬೇಕು ಎಂದು ಪ್ರಸ್ತಾಪಿಸಿದರು.
ಆಲಮಟ್ಟಿ ಕೃಷ್ಣ ನೀರಾವರಿ ಯೋಜನೆ ಪ್ರದೇಶದಲ್ಲಿ ಪುತ್ಥಳಿ ನಿರ್ಮಾಣ ಆಗಬೇಕು. ಎಸ್‌ಎಮ್ ಕೃಷ್ಣ ಅವರ ನೆನಪು ನಮಗೆ ಉಳಿಯಬೇಕು ಎಂದು ಇದೇ ವೇಳೆ ಅಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಎಚ್. ಕೆ ಪಾಟೀಲ್ ಮನವಿ ಮಾಡಿದರು.
Key words: Minister, H.K. Patil, S.M. Krishna, statue, Vidhana Soudha