ಬೆಂಗಳೂರು, ಡಿಸೆಂಬರ್ 02, 2019 (www.justkannada.in): ನಿರ್ದೇಶಕ ಎಸ್ .ನಾರಾಯಣ್ ಕಿರಿಯ ಪುತ್ರ ಪವನ್ ನಾಯಕನಟನಾಗಿ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ.
ಈಗಾಗ್ಲೇ ಸಾಕಷ್ಟು ತರಬೇತಿ ಪಡೆದೇ ಚಿತ್ರರಂಗಕ್ಕೆ ಕಾಲಿಟ್ಟಿರೋ ಪವನ್ ಅಭಿನಯದ ಈ ಚಿತ್ರಕ್ಕೆ ಮುತ್ತುರತ್ನ ಅಂತ ಟೈಟಲ್ ಇಡಲಾಗಿದೆ. ಇಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ರೋರಿಂಗ್ ಸ್ಟಾರ್ ಶ್ರೀಮುರುಳಿ ಕ್ಯಾಮರಾ ಚಾಲನೆ ನೀಡೋದ್ರ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.