ಬೆಂಗಳೂರು,ಅ,16,2019(www.justkannada.in): ನಾಳೆ ಬಂದು ಸಾ.ರಾ ಮಹೇಶ್ ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಜೆಪಿ ಭವನದಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಾ ರಾ ಮಹೇಶ್ ವಿಚಾರ ನನಗೆ ಗೊತ್ತಿದೆ…. ಅವರು ಮತ್ತೆ ವಿಶ್ವನಾಥ್ ಪರಸ್ಪರ ಆರೋಪಗಳನ್ನು ಮಾಡಿಕೊಂಡ್ರು. ಆಮೇಲೆ ಅವರು ಈ ಕೆಟ್ಟ ರಾಜಕಾರಣಕ್ಕೆ ಭಾಗಿಯಾಗಲಾರೆ. ನಾನು ಸ್ಪೀಕರ್ ಗೆ ರಾಜೀನಾಮೆ ಕೊಟ್ಟಿದ್ದೇನೆ ಅಂತಾ ನನಗೆ ಹೇಳಿದ್ರು. ಅವರು ಬೇಸರಗೊಂಡು ರಾಜೀನಾಮೆ ಕೊಟ್ಟಿರಬಹುದು. ಆದರೆ ಈಗ ಸ್ಪೀಕರ್ ಮಾತನಾಡಿರುವ ಕಾರಣ ಅವರು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಸ್ಪೀಕರ್ ಅವರು ಬೇರೆ ಕೆಲಸದಲ್ಲಿ ಇದ್ದಾರೆ. ಅವರು ಬಂದ ನಂತರ ಅವರು ಕೊಟ್ಟ ರಾಜೀನಾಮೆಯನ್ನು ವಾಪಸ್ ಪಡೆಯುತ್ತಾರೆ ಎಂದರು.
ಅಕ್ಟೋಬರ್ 22ರಂದು ಅನರ್ಹರರ ಅರ್ಜಿ ವಿಚಾರಣೆ ಇದೆ. ಸುಪ್ರೀಂಕೋರ್ಟ್ ತೀರ್ಪು ಏನು ಬರೊತ್ತೋ ನೋಡೋಣ. ಮಾಜಿ ವಿಧಾನಸಭಾದ್ಯಕ್ಷರ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದ್ರೆ ಚುನಾವಣೆ ಬರುತ್ತೆ. ಇಲ್ಲ ಅಂದರೆ ಚುನಾವಣೆ ಬರೋದಿಲ್ಲ. ಈಗಾಗಲೇ ಕುಮಾರಸ್ವಾಮಿ ಅಭ್ಯರ್ಥಿಗಳ ಕಣಕ್ಕಿಳಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೇವಲ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನಿಂದ ನಿಲ್ತಾರೆ ಅನ್ನೋ ಭಾವನೆಯನ್ನು ಕೆಲವರು ವ್ಯಕ್ತಪಡಿಸ್ತಾರೆ. ಆದರೆ ನಾವು ಎಲ್ಲ ಕಡೆಯೂ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು.
ನಾನು ಹೆಚ್ ವಿಶ್ವನಾಥ ರ ಬಗ್ಗೆ ಮಾತನಾಡಲ್ಲ. ಒಬ್ಬರು ದೇವಸ್ಥಾನದಲ್ಲಿ ಆಣೆ ಮಾಡ್ತೀನಿ ಅಂತಾರೆ. ಮತ್ತೊಬ್ಬರು ನನಗೇನು ದರ್ದ್ ಇದೆ ಅಂತಾರೆ.. ಹೀಗಾಗಿ ಈ ಆಣೆ ಪ್ರಮಾಣದಲ್ಲಿ ಯಾವುದೇ ಅರ್ಥ ಇಲ್ಲ ಎಂದರು
ಸಿಎಂ ಯಡಿಯೂರಪ್ಪರಿಂದ ಮಹಾರಾಷ್ಟ್ರ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವಿಚಾರ ಅವರಿಗೂ ಪಕ್ಷ ಮುಖ್ಯ. ಇಲ್ಲಿ ಕೆಲಸ ಮಾಡೋಕೆ ಆಯಾ ಕ್ಷೇತ್ರಗಳಿಗೆ ಉಸ್ತುವಾರಿ ಮಂತ್ರಿ ನೇಮಕ ಮಾಡಿದ್ದಾರೆ. ಉಸ್ತುವಾರಿಗಳು ನೇಮಕ ಮಾಡಿರೋದ್ರೀಂದ ಅವ್ರು ಪ್ರಚಾರಕ್ಕೆ ಹೋಗಿದ್ದಾರೆ. ಯಡಿಯೂರಪ್ಪ ಅ ಪಕ್ಷದ ನಾಯಕರು. ಪಕ್ಷದ ಸೂಚನೆ ಹಿನ್ನೆಲೆ ಅವ್ರು ಪ್ರಚಾರಕ್ಕೆ ಹೋಗಿರಬಹುದು ಕನ್ನಡ ಪ್ರಾಬಲ್ಯದಲ್ಲಿ ಪ್ರಚಾರ ಮಾಡೋಕೆ ಹೋಗಿದ್ದಾರೆ. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಅವ್ರು ಹೋಗಿದ್ದಾರೆ ಅನ್ನಿಸುತ್ತದೆ ಎಂದರು.
ರೈತರ ಸಾಲಮನ್ನಾ ಸಂಪೂರ್ಣ ಮಾಡಲು ಆಗಲ್ಲ ಅನ್ನೋ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಡಿಯಡಿಯೂರಪ್ಪ ಹಾಗೇ ಮಾಡೊದಿಲ್ಲ ಅಂತ ನಂಬಿಕೆ ಇದೆ. 24 ಗಂಟೆಯೊಳಗೆ ಸಾಲಮನ್ನಾ ಮಾಡಬೇಕು ಅಂತ ಯಡಿಯೂರಪ್ಪ ಕುಮಾರಸ್ವಾಮಿಗೆ ಅವತ್ತು ಹೇಳಿದ್ರು. ಕುಮಾರಸ್ವಾಮಿ ಸಿಎಂ ಆದಾಗ ಬ್ಯಾಂಕುಗಳ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದ್ರು. ಬ್ಯಾಂಕ್ ನ ಸಾಲ ಬಹುತೇಕ ಪೂರ್ಣವಾಗಿದೆ. ಶೆಡ್ಯುಲ್ಡ್ ಬ್ಯಾಂಕ್ ಸಾಲದ ಬಗ್ಗೆ ಸ್ವಲ್ಪ ಗೊಂದಲ ಇದೆ. ನಾನು ಮುಖ್ಯ ಕಾರ್ಯದರ್ಶಿಗಳಿಗೆ ಮಾತಾಡಿದ್ದೇನೆ. ಸಹಕಾರ ಬ್ಯಾಂಕ್ ಸಾಲಮನ್ನಾ ಗೆ ಇಟ್ಟಿದ್ದ ಹಣದಲ್ಲಿ ಇನ್ನು ಸ್ವಲ್ಪ ಹಣ ಉಳಿದಿದೆ. ಉಳಿದ ಹಣ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಬಹುದು ಅಂತ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಹಾಗೇ ಮಾಡೊಲ್ಲ ಅಂದುಕೊಂಡಿದ್ದೇನೆ ಎಂದರು.
Key words: Sa Ra Mahesh- back- resigns –tomorrow-Former Prime Minister- HD Deve Gowda