ಬೆಂಗಳೂರು, ಜನವರಿ,2,2025 (www.justkannada.in): ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜಕಪನೂರು ವಿರುದ್ದ ವಂಚನೆ ಕೊಲೆ ಬೆದರಿಕೆ ಆರೋಪ ಮಾಡಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಹೌದು, ಸಚಿನ್ ಪಂಚಾಳ ಗುತ್ತಿಗೆದಾರನೇ ಅಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಗಜಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಜಗನ್ನಾಥ್ ಶೆಗಜಿ, ಸಚಿನ್ ಗುತ್ತಿಗೆದಾರ ಎಂದು ಎಲ್ಲೂ ನೋಂದಣಿ ಇಲ್ಲ. ಗುತ್ತಿಗೆದಾರರ ಸಂಘದ ಬೀದರ್ ಘಟಕದಿಂದಲೂ ಮಾಹಿತಿ ಪಡೆಯಲಾಗಿದೆ. ಇತರೆ ಜಿಲ್ಲೆಗಳಿಂದಲೂ ಗುತ್ತಿಗೆದಾರ ಅಲ್ಲವೆಂದು ಮಾಹಿತಿ ಲಭ್ಯವಾಗಿದೆ ಎಂದರು.
ಧಾರವಾಡ ಇಂಜಿನಿಯರ್ ಕಚೇರಿಯಲ್ಲೂ ಗುತ್ತಿಗೆದಾರ ಎಂದು ಎಲ್ಲೂ ಕೂಡ ನೋಂದಣಿ ದಾಖಲೆ ಇಲ್ಲ. ಎರಡು ಕಚೇರಿಯಿಂದ ಮಾಹಿತಿಯನ್ನು ಗುತ್ತಿಗೆದಾರರ ಸಂಘ ಇದೀಗ ಪಡೆದುಕೊಂಡಿದೆ.ಆದರೆ ಎಲ್ಲೂ ಕೂಡ ಸಚಿನ್ ಪಂಚಾಳ್ ಹೆಸರು ಗುತ್ತಿಗೆದಾರ ಎಂದು ನಮೂದು ಆಗಿಲ್ಲ ಎನ್ನಲಾಗಿದೆ.
Key words: Sachin Panchal, suicide, not, contractor, Jagannath Shegaji