ಬೆಂಗಳೂರು,ಡಿಸೆಂಬರ್,30,2024 (www.justkannada.in): ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನ ಜನವರಿ 3ರೊಳಗೆ ಸಿಬಿಐಗೆ ನೀಡದಿದ್ದರೇ ಬೃಹತ್ ಹೋರಾಟ ಮಾಡುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಹತ್ಯೆ ನಡೆದಿದೆ. ರಾಝ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡಿದೆ. ಶಾಸಕರು ಸಚಿವರ ಕುಮ್ಮಕ್ಕಿನಿಂದ ಆತ್ಮಹತ್ಯೆ ನಡೆದಿದೆ. ಚಂದ್ರಶೇಖರ್ ಆತ್ಮಹತ್ಯೆ ಯಾದಗಿರಿಯಲ್ಲಿ ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡರು ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಕಿಡಿಕಾರಿದರು.
ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಪೋಸ್ಟ್ ಮಾಡಿದ ಕೂಡಲೇ ಆತನ ಸಹೋದರಿಯರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಸೋದರನ ಪ್ರಾಣ ಉಳಿಸುವಂತೆ ಪಿಎಸ್ ಐ ಬಳಿ ಮನವಿ ಮಾಡುತ್ತಾರೆ ಆದರೆ ಪಿಎಸ್ ಐ ಇತರರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಹರಿಹಾಯ್ದರು.
ಸರ್ವ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ. ಎಲ್ಲಾ ಇಲಖೆಗಳಿಗೂ ಇವರೇ ಮೇಟಿ. ಸದನದಲ್ಲಿ ಸಿಎಂ ಗೃಹ ಸಚಿವರೂ ಬದಲು ಇವರೇ ಮಾತನಾಡುತ್ತಾರೆ. ರಾಜು ಕಪನೂರು ಪ್ರಿಯಾಂಕ್ ಖರ್ಗೆ ಆಪ್ತ ಹೀಗಾಗಿ ರಾಜೀನಾಮೆಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ ಎಂದರು.
Key words: Sachin, suicide case, CBI, BY Vijayendra