ಆ.26ರಂದು ದೇವನೂರು ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿ ವಾಚಿಕ ಅಭಿನಯ

ಮೈಸೂರು, ಆಗಸ್ಟ್, 24, 2020(www.justkannada.in): ರಂಗಾಯನವು ಸಾಹಿತಿ ದೇವನೂರು ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ವಾಚಿಕ ಅಭಿನಯಕ್ಕೆ ಚಿತ್ರೀಕರಿಸಲಾಗಿದ್ದು, ಆಗಸ್ಟ್ 26ರಂದು ರಂಗಾಯಣದ ಭೂಮಿಗೀತದಲ್ಲಿ ಅನಾವರಣಗೊಳ್ಳಲಿದೆ.

jk-logo-justkannada-logo

ರಂಗಾಯಣವು ಇಪ್ಪತ್ತಾರು ವರ್ಷಗಳ ಹಿಂದೆ ರಂಗರೂಪಕ್ಕಳವಡಿಸಿ, ಪ್ರದರ್ಶನ ನೀಡಿ ರಾಜ್ಯದಾದ್ಯಂತ ಮನೆಮಾತಾಗಿದ್ದ ಕುಸುಮಬಾಲೆ ಕಾದಂಬರಿಯು ಇದೀಗ ಕೋವಿಡ್ ನಿಯಮಗಳಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ವಾಚಿಕ ಅಭಿನಯದಲ್ಲಿ ಈ ರಂಗಕೃತಿಯನ್ನು ಚಿತ್ರೀಕರಿಸಲಾಗಿದೆ.

Sahithi,Devanoor,Mahadeva,26th,Kusumabale,novel,oral,performance

ಆಗಸ್ಟ್ 26 ರಂದು ಮಧ್ಯಾಹ್ನ 2ಕ್ಕೆ…

ಆಗಸ್ಟ್ 26 ರಂದು ಮಧ್ಯಾಹ್ನ 2ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ದೇವನೂರು ಮಹಾದೇವ ಅವರು ಅನಾವರಣಗೊಳಿಸಲಿದ್ದಾರೆ. ರಂಗಾಯಣದ ವಿನ್ಯಾಸಕ ಎಚ್.ಕೆ.ದ್ವಾರಕಾನಾಥ್ ಅವರು ಕುಸುಮಬಾಲೆಯ ಜಾನಪದೀಯ ಭಿತ್ತಿಚಿತ್ರಗಳನ್ನು ರೂಪಿಸಿದ್ದು, ಇದರ ಅನಾವರಣವನ್ನು ರಂಗಸಮಾಜದ ಸದಸ್ಯರು, ರಂಗ ನಿರ್ದೇಶಕರಾದ ಬಿ.ವಿ.ರಾಜಾರಾಂ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಸುಮಬಾಲೆ ನಾಟಕದ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮದ ನಂತರ ಪ್ರತಿದಿನ ಸಂಜೆ 6.0ಕ್ಕೆ ರಂಗಾಯಣ ಜಾಲತಾಣ www.rangayana.org ನಲ್ಲಿ ಪಕ್ಕದಲ್ಲಿ ಗುರುತು ಮಾಡಿದ f ಮೇಲೆ ಒತ್ತಿದರೆ ಫೇಸ್ ಬುಕ್ ನಲ್ಲಿ ಮತ್ತು ಅದರಂತೆ ಪಕ್ಕದಲ್ಲಿರುವ youtube ಲೋಗೋ ಮೇಲೆ ಒತ್ತಿದರೆ ಯೂಟ್ಯೂಬ್ ನಲ್ಲಿ ಈ ವಾಚಿಕಾಭಿನಯವನ್ನು ವೀಕ್ಷಿಸಬಹುದು ಎಂದು ರಂಗಾಯಣ ನಿರ್ದೇಶಕ  ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

Key words ; Sahithi-Devanoor-Mahadeva-26th-Kusumabale-novel-oral-performance