ಮುಂಬೈ, ಅಕ್ಟೋಬರ್ 12, 2019 (www.justkannada.in): ಸಾಹೋ ಫ್ಲಾಪ್ ಆಗಿದ್ದು, ಹಾಕಿದ ಬಂಡವಾಳವೂ ವಾಪಸ್ಸು ಬರಲಿಲ್ಲ. ಇದರಿಂದಾಗಿ ನಟ ಪ್ರಭಾಸ್ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ಒಂದೆಡೆ ಸಾಹೋ ರಿಲೀಸ್ ಆಗಿ 400 ಕೋಟಿ ರೂ. ಸಂಗ್ರಹಿಸಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಾದರೂ, ಮೂಲಗಳ ಪ್ರಕಾರ ಅಷ್ಟು ಹಣ ಬಂದಿಲ್ಲ ಎನ್ನಲಾಗಿದೆ.
ಸಿನಿಮಾ ಫ್ರೀ ರಿಲೀಸ್ಗೆ ಮುನ್ನ ನಿರ್ಮಾಪಕರು ತೆಗೆದುಕೊಂಡ ಹಣವೂ ವಿತರಕರಿಗೆ ವಾಪಸ್ಸು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ವಿತರಕರಿಗೆ ಪ್ರಭಾಸ್ ಹಣ ವಾಪಸ್ಸು ಮಾಡುವುದಾಗಿ ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.