ಸಂಸದರ ವೇತನ, ಭತ್ಯೆ ಹಾಗೂ ಪಿಂಚಣಿ ಹೆಚ್ಚಳ

ನವದೆಹಲಿ, ಮಾರ್ಚ್​ 25,2025 (www.justkannada.in):  ರಾಜ್ಯದಲ್ಲಿ ಶಾಸಕರು ಸಚಿವರು ವಿಪಕ್ಷ ನಾಯಕರು ಸಭಾಪತಿಗಳ ವೇತನ ಶೇ 100ರಷ್ಟು ಏರಿಕೆಯಾದ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಸಹ  ಲೋಕಸಭೆ ಮತ್ತು ರಾಜ್ಯಸಭಾ ಸಂಸದರ ವೇತನ, ಭತ್ಯೆ ಹಾಗೂ ಪಿಂಚಣಿಯನ್ನ ಹೆಚ್ಚಳ ಮಾಡಿದೆ.

ಸಂಸದರ ವೇತನದ ಹೊರತಾಗಿ, ಮಾಜಿ ಸಂಸತ್ ಸದಸ್ಯರ ಭತ್ಯೆಗಳು ಮತ್ತು ಪಿಂಚಣಿಯನ್ನು ಸಹ ಹೆಚ್ಚಿಸಲಾಗಿದೆ. ಈ ಏರಿಕೆಯು ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ. ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವಾಲಯ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ ಎನ್ನಲಾಗಿದೆ.

ಸಂಸದರ ವೇತನವು ತಿಂಗಳಿಗೆ 1 ಲಕ್ಷ ರೂ.ಗಳಿಂದ 1.24 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ದಿನಭತ್ಯೆ 2,000 ರೂ.ಗಳಿಂದ 2,500 ರೂ.ಗಳಿಗೆ ಏರಿಕೆಯಾಗಿದೆ. ಹಾಗೆಯೇ  ಮಾಜಿ ಸಂಸದರ ಪಿಂಚಣಿ ಕೂಡ ತಿಂಗಳಿಗೆ 25,000 ರೂ.ಗಳಿಂದ 31,000 ರೂ.ಗಳಿಗೆ ಏರಿಕೆಯಾಗಿದೆ. ಇದಲ್ಲದೆ, ಐದು ವರ್ಷಗಳಿಗಿಂತ ಹೆಚ್ಚಿನ ಸೇವೆಗೆ ಹೆಚ್ಚುವರಿ ಪಿಂಚಣಿಯನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನದ ಮಧ್ಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Key words: Increase, salaries, allowances, pensions, MPs