ಬೆಂಗಳೂರು, ಡಿಸೆಂಬರ್ 16, 2021 (www.justkannada.in): ಕನ್ನಡ ಧ್ವಜ ಸುಟ್ಟು ಹಾಕಿರುವುದರ ವಿರುದ್ಧ ನಟರಾದ ದರ್ಶನ್, ಶಿವಣ್ಣ, ಜಗ್ಗೇಶ್ ಸೇರಿದಂತೆ ಸ್ಯಾಂಡಲ್ ವುಡ್ ನಟರು ಸಿಡಿದೆದ್ದಿದ್ದಾರೆ.
ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟು ಹಾಕಿದ ಪ್ರಕರಣದ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಕನ್ನಡದ ನಟ-ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಧ್ವಜ ಸುಟ್ಟು ಹಾಕಿದವರಿಗೆ ಶಿಕ್ಷೆಯಾಗಲಿ, ನಿಜವಾದ ಕನ್ನಡಿಗನಿಗೆ ಬಿಡುಗಡೆಯಾಗಲಿ ಎಂದು ನಟ ಶಿವರಾಜ್ ಕುಮಾರ್ ಒತ್ತಾಯಿಸಿದ್ದಾರೆ.
ದರ್ಶನ್, ಜಗ್ಗೇಶ್ ಕೂಡ ಕೂಡಾ ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಧ್ವಜ ಸುಟ್ಟು ಹಾಕಿದವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.