ಬೆಂಗಳೂರು, ಅಕ್ಟೋಬರ್,1,2021(www.justkannada.in): ಜೆಡಿಎಸ್ ಬಿಟ್ಟು ಬಿಜೆಪಿ ಸೇರುವುದಾಗಿ ವಿಧಾನ ಪರಿಷತ್ ಸದಸ್ಯ, ಸಂದೇಶ್ ನಾಗರಾಜ್ ಘೋಷಿಸಿದ್ದಾರೆ.
ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಂದೇಶ್ ನಾಗರಾಜ್ , ಜೆಡಿಎಸ್ ತೊರೆದು ನಾನು ಬಿಜೆಪಿ ಸೇರುತ್ತೇನೆ. ಜನವರಿ 5ರವರೆಗೆ ನಾನು ಜೆಡಿಎಸ್ ನಲ್ಲಿ ಇರುತ್ತೇನೆ, ಆ ಬಳಿಕ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ಧ ಸಂದೇಶ್ ನಾಗರಾಜ್ ಅವರು ಕಳೆದ ಒಂದೂವರೆ ವರ್ಷದಿಂದ ಜೆಡಿಎಸ್ ನಿಂದ ದೂರ ಉಳಿದಿದ್ದರು.
Key words: Sandesh Nagaraj –announces- joining -BJP – leaving- JDS