ಮೈಸೂರು,ಜನವರಿ,13,2025 (www.justkannada.in): ನಗರದ ಕಾಳಿದಾಸ ರಸ್ತೆಯಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಫರ್ಟಿಲಿಟಿ ಸೆಂಟರ್ ಹಾಗೂ ಶ್ರೀ ದುರ್ಗಾ ಫೌಂಡೇಶನ್ ಸಹಯೋಗದೊಂದಿಗೆ ಸಂಕ್ರಾಂತಿ ಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಸೀರೆ, ಬಳೆ, ಎಳ್ಳು, ಬೆಲ್ಲ ವಿತರಿಸಿ ಶುಭ ಕೋರಲಾಯಿತು.
ಈ ವೇಳೆ ಮಾತನಾಡಿದ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ್, ಹಬ್ಬಗಳು ಸಂಸ್ಕಾರ ಬಿಂಬಿಸುವ ಪ್ರತೀಕವಾಗಿವೆ. ಭಾರತೀಯ ಸಂಪ್ರದಾಯದಲ್ಲಿ ಸಂಕ್ರಾಂತಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ರೈತರು ಹೊಸ ವರ್ಷದಂತೆ ಆಚರಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತಿದೆ. ಇನ್ನು ಜಾನುವಾರುಗಳಿಗೆ ಸಿಂಗಾರಗೊಳಿಸಿ, ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಈ ಹಬ್ಬ ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್, ಕಾಂಗರೂ ಕೇರ್ ಸಿ.ಇ.ಒ & ಸಂಸ್ಥಾಪಕ ಡಾ. ಶೇಖರ್ ಸುಬ್ಬಯ್ಯ, ವೈದ್ಯ ಮಂಜುನಾಥ್, ಡಾ. ವೀಣಾ, ಡಾ. ಶೃತಿ, ಡಾ. ಶುಭ, ಡಾ. ಸ್ವಾತಿ, ಡಾ. ರಶ್ಮಿ ಕಿಶೋರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷರಾದ ಸವಿತಾ ಘಾಟ್ಕೆ, ಮಾಳಿನಿ ಪಾಲಾಕ್ಷ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ನಿರ್ದೇಶಕರು ಎ ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: Sankranti, celebrated, civic workers, mysore