ಮೈಸೂರು,ಜನವರಿ,13,2023(www.justkannada.in): ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮೈಸೂರಿನ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್. ಗುಜರಾತ್ ಪೊಲೀಸರ ಸಹಾಯದಿಂದ ಅಹಮದಬಾದ್ ನಲ್ಲಿ ಸ್ಯಾಂಟ್ರೋ ರವಿ ಬಂಧಿಸಲಾಗಿದೆ. ರಾಜ್ಯದ ಹಲವೆಡೆಯೂ ರವಿ ಕಾರಿನಲ್ಲಿ ಸುತ್ತಾಡಿದ್ದ. ಆತನಿಗಾಗಿ ಉಡುಪಿ ಶಿವಮೊಗ್ಗ ಎಲ್ಲಾ ಕಡೆ ಹುಡುಕಾಟ ನಡೆದಿತ್ತು. ನಾವು ತಿವ್ರ ಹುಡುಕಾಟ ನಡೆಸಿದ ಬಳಿಕ ಸ್ಯಾಂಟ್ರೋ ರವಿ ಹೊರ ರಾಜ್ಯಕ್ಕೆ ಹೋಗಿದ್ದ. ನಿನ್ನೆ ಮಂತ್ರಾಲಯದಲ್ಲಿ ರವಿ ಆಪ್ತನನ್ನ ಬಂಧಿಸಲಾಗಿತ್ತು. ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ನಿತ್ಯ ಜಾಗ ಬದಲಿಸುತ್ತಿದ್ದ. ಸಿಮ್ ಸಹ ಬದಲಾಯಿಸುತ್ತಿದ್ದ, ಇದರಿಂದಾಗಿ ಬಂಧಿಸಲು ವಿಳಂಬವಾಗಿತ್ತು ಎಂದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ಘೋಷಣೆ ಮಾಡಿದ ಅಲೋಕ್ ಕುಮಾರ್, ಸ್ಯಾಂಟ್ರೋ ರವಿ ಬಂಧಿಸಿ ರಾಜ್ಯದ ಪೊಲೀಸರ ಗೌರವ ಉಳಿಸಿದ್ದಾರೆ. ಸ್ಯಾಂಟ್ರೋ ರವಿ ವಿಮಾನದಲ್ಲಿ ಗುಜರಾತ್ ಗೆ ಹಾರಿದ್ದ. ಮೈಸೂರಿನಿಂದ ಮಂಗಳೂರಿಗೆ ತೆರಳಿದ್ದ. ಮಂಗಳೂರಿನಿಂದ ಪೂನಾಗೆ ಹೊರಟು ಅಲ್ಲಿಂದ ವಿಮಾನದಲ್ಲಿ ಗುಜರಾತ್ ಗೆ ತೆರಳಿದ್ದ. ಈತನ ಬಂಧನಕ್ಕಾಗಿ ಎಸಿಪಿ ಶಿವಶಂಕರ್ , ಅಶ್ವತ್ ನಾರಾಯಣ್ ನೇತೃತ್ವದ ತಂಡ, ಇನ್ಸ್ ಪೆಕ್ಟರ್ ಗಳಾದ ರಾಜು, ದಿವಾಕರ್, ಮಲ್ಲೇಶ್, ಸಂತೋಷ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಸ್ಯಾಂಟ್ರೋ ರವಿಯನ್ನ ಬಂಧಿಸಲಾಗಿದೆ. ಮೈಸೂರು ಪೊಲೀಸರಿಂದ ದಸ್ತಗಿರಿ ಮಾಡಲಾಗಿದೆ. ಸ್ಯಾಂಟ್ರೋ ರವಿ ರಾಜ್ಯ ಬಿಟ್ಟು ಬೇರೆ ಕಡೆ ಪ್ರಯಾಣ ಮಾಡಿದ್ದ. ಕೇರಳ, ತೆಲಂಗಾಣ, ಮಹಾರಾಷ್ಟ್ರ ಕಡೆಗೆ ಪ್ರಯಾಣ ಮಾಡಿದ್ದ. ರಾಮನಗರ, ಮಂಡ್ಯ, ಮೈಸೂರು ಎಸ್ಪಿ ಕಾರ್ಯಾಚರಣೆ, ರಾಯಚೂರು ಎಸ್ಪಿ ಮಂತ್ರಾಲಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಎನ್ ಆರ್ ಠಾಣಾಧಿಕಾರಿ ಅಜರುದ್ದೀನ್, ಮೇಟಗಳ್ಳಿಯ ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆತ ಕ್ರಿಮಿನಲ್ ಇದ್ದ. ಆತನನ್ನ ಚೇಸ್ ಮಾಡಿ ಹಿಡಿದಿದ್ದೀವಿ. ಒಡನಾಡಿ ಸಂಸ್ಥೆ ಸೇರಿ ಹಲವೆಡೆ ಮಾತನಾಡಿದ್ದೇವೆ. ಆರ್.ಆರ್.ನಗರ, ದಟ್ಟಗಳ್ಳಿಯ ಎರಡು ಮನೆ ಸರ್ಚ್ ಮಾಡಲಾಗಿತ್ತು. ಹಲವು ವಸ್ತುಗಳು ಕೂಡ ಸಿಕ್ಕಿವೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸೂಚನೆ ನೀಡಿದ್ದರು. ಪ್ರಧಾನಿ ಅವರ ಬಂದೋಬಸ್ತ್ ಗೆ ತೆರಳಿದ್ದ ವೇಳೆ ಕೂಡ ಸಿಎಂ ಕೇಳಿದ್ದರು ಎಂದರು.
ಕಾರ್ಯಾಚರಣೆಗೆ ಸಾಕಷ್ಟು ತೊಡಕಾಗಿತ್ತು. ಕಾರ್, ಡ್ರೆಸ್, ಚಹರೆ ಎಲ್ಲವನ್ನೂ ಕೂಡ ಸ್ಯಾಂಟ್ರೋ ರವಿ ಬದಲಿಸುತ್ತಿದ್ದ. ಬಿಳಿಬಟ್ಟೆ ಹಾಕಿಕೊಂಡು ಹಾರ್ಡ್ ಕೋರ್ ಕ್ರಿಮಿನಲ್ ಆಗಿದ್ದ. ಈ ಹಿಂದೆ ರವಿ 11 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ. 2005ರಲ್ಲೇ ಗೂಂಡಾ ಕಾಯ್ದೆಯಡಿ ಸ್ಯಾಂಟ್ರೋ ರವಿ ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಆತನಿಗೆ ಸಹಕರಿಸಿದ್ದ ಸತೀಶ್ ,ರಾಮ್ ಜೀ, ಮಧುಸೂಧನ್, ಸತೀಶ್ ಬಂಧಿಸಲಗಿದೆ. ರಾಮ್ ಜೀ ,ಗುಜರಾತ್ ನಿವಾಸಿಯಾಗಿದ್ದಾನೆ ಎಂದು ಅಲೋಕ್ ಕುಮಾರ್ ತಿಳಿಸಿದರು.
Key words: santro Ravi-arrest-mysore-ADGP-Alok kumar