ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ…

ಮೈಸೂರು,ಮಾರ್ಚ್,26,2021(www.justkannada.in): ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.jk

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಇನ್ನು ಸಪ್ತಪದಿ ವಿವಾಹಗಳ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮಾಡುವ ಸಪ್ತಪದಿ ವಿವಾಹಗಳು ವ್ಯವಸ್ಥಿತವಾಗಿ ಆಗಬೇಕೆಂಬುದು ನಮ್ಮ ಕಲ್ಪನೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ 14, ನಂಜನಗೂಡಿನಲ್ಲಿ 17 ಜೋಡಿಗಳ ವಿವಾಹ ನಡೆದಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 22ನೇ ತಾರೀಖಿನಂದು ದಿನಾಂಕ ನಿಗದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.Saptapadhi- program -again - Chamundeshwari Temple -  Minister -Kota Srinivasa Poojary.

ಹಾಗೆಯೇ ತಲಕಾಡಿನಲ್ಲಿಯೂ ಸೇರಿದಂತೆ ರಾಜ್ಯದ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹಗಳು ನಡೆಯಲಿವೆ. ಕೊರೋನಾ ಕಾರಣದಿಂದ ಸೀಮಿತಗೊಳಿಸಿ, ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿ, ಪ್ರತಿ ತಿಂಗಳೂ ಈ ಕಾರ್ಯಕ್ರಮ ಮಾಡಲಾಗುವುದು. ಸ್ಥಳೀಯವಾಗಿ ಆಯಾ ಸಂಪ್ರದಾಯಗಳಂತೆ ದಿನಾಂಕ ನಿಗದಿಪಡಿಸುವಂತೆ ಮನವಿ ಬಂದಲ್ಲಿ ಅದನ್ನೂ ಕೂಡ ಪರಿಗಣಿಸಲಾಗುವುದು ಎಂದು ಸಚಿವ ಕೊಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮಾಂಗಲ್ಯಕ್ಕೆ ಟೆಂಡರ್ ಕರೆಯಲು ಸಮಸ್ಯೆಗಳಾದವು.  ಆದ್ದರಿಂದ ಕಾವೇರಿ ಎಂಪೋರಿಯಂ ಮೂಲಕ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಲು ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ಸಾಮಾನ್ಯ ಜನರಿಗೆ ಸಪ್ತಪದಿ ಕಾರ್ಯಕ್ರಮದಿಂದ ಅನುಕೂಲವಾಗಲಿದೆ ಜೊತೆಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ENGLISH SUMMARY….

‘Saptapadi program to be held at Chamundeshwari Temple in future’ – Minister Kota Srinivasa Poojari
Mysuru, Mar. 26, 2021 (www.justkannadain): Muzrai Minister Kota Srinivasa Poojari today informed me that the Saptapadi program will be held in the coming days at the Chamundeshwari temple.
He visited the Chamundi hills and had darshan of goddess Chamundeshwari today. Speaking about the Saptapadi wedding program he explained that it is his wish that the program should be held systematically. “14 weddings have taken place at the Chamundeshwari Temple and 17 in Najangud. We have scheduled the date of Saptapadi wedding program at the Srikanteshwara Temple in Najangud on April 22. We have plans to conduct the program at the Chamundeshwari temple in the coming days,” he added.
He also informed that similar mass marriage programs would also be held in 100 different temples across the state including Talkad. “Because of Corona pandemic this year the number of mass marriages has been limited and different dates have been fixed. We will try to conduct mass marriages every month. We also have considered requests from people to fix the date of mass marriages based on the local traditions and it will be followed in the future,” he informed.Saptapadhi- program -again - Chamundeshwari Temple -  Minister -Kota Srinivasa Poojary.
Keywords: Muzrai Minister Kota Srinivasa Poojari/ Mass marriages/ Chamundeshwari Temple/ Chamundi hills/ Mysuru/ Saptapadi program

Key words:  Saptapadhi- program -again – Chamundeshwari Temple –  Minister -Kota Srinivasa Poojary.