ಮೈಸೂರು, ಆಗಸ್ಟ್ 05, 2019 (www.justkannada.in): ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ, ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪ-ಪ್ರತ್ಯಾರೋಪ ರಾಜಕೀಯ ಮತ್ತೊಂದು ತಿರುವು ಪಡೆದಿದ್ದು, ದೇವಸ್ಥಾನದ ಆಣೆ ಪ್ರಮಾಣದ ಹಂತ ತಲುಪಿದೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಾ ಮಹೇಶ್, ಎಚ್ವಿ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ‘ಪಕ್ಷ ದ್ರೋಹ ಮಾಡಿ ಬಾಂಬೆಗೆ ಹೋಗಿ ಕುಳಿತಿದ್ದು ಸುಳ್ಳಾ.? ಯಾವುದೇ ಹಣ ಪಡೆಯದೆ ಹೋಗಿದ್ರಾ.? ಬನ್ನಿ ನೀವು ಎಲ್ಲೇ ಹೇಳಿದರು ಅಲ್ಲಿಗೆ ನಾನು ಬರಲು ಸಿದ್ದ. ನಿಮ್ಮದೆ ಜಾಗ, ನಿಮ್ಮದೆ ಆಯ್ಕೆ ದೇವರ ಮೇಲೆ ಆಣೆ ಮಾಡ್ತೇನೆ. ಸುಳ್ಳು ಆಣೆ ಮಾಡಿದ್ರೆ ದೇವರು ನೋಡಿಕೊಳ್ತಾನೆ ಎಂದು ವಿಶ್ವನಾಥ್ ಸವಾಲಿಗೆ ಪ್ರತಿ ಸವಾಲ್ ಹಾಕಿದರು.
ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದವರು ಅನೇಕರಿದ್ದಾರೆ. ಜನರಿಗೆ ನಿಮ್ಮ ಗೋಮುಖ ವ್ಯಾಘ್ರದ ಮುಖ ಗೊತ್ತಾಗಬೇಕಿದೆ. ಬನ್ನಿ ಪ್ರಮಾಣ ಮಾಡಿ, ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ವಿಶ್ವನಾಥ್ ಕಾರ್ಕೋಟಕ ವಿಷ. ಮೂಲೇ ಗುಂಪಾದ ಅವರನ್ನ ಪಕ್ಷಕ್ಕೆ ಕರೆತಂದೆ. ಇದರಿಂದ ಹಿರಿಯ ರಾಜಕಾರಣಿಗೆ ಉತ್ತಮ ನೆಲೆ ಕಲ್ಪಿಸೋ ಉದ್ದೇಶ ಇತ್ತು.ಆದರೆ ವಿಶ್ವನಾಥ್ ಈ ರೀತಿಯ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ ಎಂದು ಜರಿದರು.
ದೇವೇಗೌಡರ ಮನೆಯಲ್ಲಿ ಕುಳಿತು ಏನ್ ಹೇಳಿದ್ರಿ ನೀವು. ಸಿದ್ದರಾಮಯ್ಯರಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಡ, ಸಚಿವ ಸ್ಥಾನ ಬೇಡ. ನನ್ನ ಕೊನೆಗಾಲದಲ್ಲಿ ಕೇವಲ ನನಗೆ ಶಾಸಕನನ್ನ ಮಾಡಿ ಸಾಕು ಎಂದಿದ್ರಿ. ಅದೆಲ್ಲವು ಮರೆತು ಹೋಯ್ತ.
ಎಲ್ಲೇ ಕರೆದರು ನಾನು ಚರ್ಚೆಗೆ ಸಿದ್ದ ಎಂದು ವಿಶ್ವನಾಥ್ ಪಂಥ್ವಾನಕ್ಕೆ ಮಾಜಿ ಸಚಿವ ಸಾರಾ ಮಹೇಶ್ ಒಪ್ಪಿಗೆ ಸೂಚಿಸಿದರು.
ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಬೇಕಾದ್ರು ಬರ್ತಿನಿ. ಬಹಿರಂಗ ಚರ್ಚೆಗೆ ಬೇಕಾದ್ರು ನಾನು ಸಿದ್ದನಿದ್ದೇನೆ.
ನಿನ್ನೆ ನಾನು ಕಾಯುತ್ತಿದ್ದೆ ಅವರು ಚರ್ಚೆಗೆ ಆಹ್ವಾನ ಮಾಡ್ತಾರೆಂದು. ಆದರೆ ಅವರು ಪಂಥ್ವಾಹನ ನೀಡಿದ್ದಾರೆ, ನಾನು ಬದ್ದ. ಅವರು ಎಲ್ಲಿಯದರು ಕರೆಯಲಿ ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷಕ್ಕೆ ಮೋಸ ಮಾಡಿ ಹೋಗಿಲ್ಲ.
ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡ್ತೀರಾ.? ನಿಮಗೆ ಆ ಧೈರ್ಯ ಇದ್ದರೆ ಬನ್ನಿ ಪ್ರಮಾಣ ಮಾಡಿ ಹೇಳಿದರು.