ಬೆಳಗಾವಿ, ನವೆಂಬರ್ 17, 2019 (www.justkannada.in): ಶಾಸಕ ಸತೀಶ್ ಜಾರಕಿಹೊಳಿ ಸಹೋದರನ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿ ಪದವಿ ಪಡೆದಿದ್ದ. ರಮೇಶ್ ಜಾರಕಿಹೊಳಿ ಕಾಲಿಗೆ ಬಿದ್ದದ್ದು ಅಲ್ಲದೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಗಳಗಳನೆ ಅತ್ತಿದ್ದಾನೆ. ಹೀಗಾಗಿ ಆತನಿಗೆ ಮಂತ್ರಿಪದವಿ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಮೇಶ್ನನ್ನು, ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿ ಮಾಡಿದರು ಎನ್ನುವ ಕಾರಣಕ್ಕೆ ಭಿನ್ನಾಭಿಪ್ರಾಯ ಇತ್ತೆ ಹೊರತು, ಜಗಳ ಅಲ್ಲ. ನಮ್ಮ ಮೂವರ ನಡುವೆ ಒಳ್ಳೇ ಸಂಬಂಧ ಇದೆ. ಉಪ ಚುನಾವಣಾ ಪ್ರಚಾರಕ್ಕೆ ಮಾಜಿ ಸಚಿವ ಡಿಕೆಶಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸುತ್ತಾರೆ ಎಂದರು.