ಮೈಸೂರಿನ ರಂಗಾಯಣದಲ್ಲಿಂದು ‘ಸತ್ತವರ ನೆರಳು’ ನಾಟಕ ಪ್ರದರ್ಶನ

ಮೈಸೂರು,ಮಾರ್ಚ್,29,2025 (www.justkannada.in): ಮೈಸೂರಿನ ರಂಗಾಯಣದಲ್ಲಿ ಈ ವಾರಾಂತ್ಯಕ್ಕೆ ಪ್ರಮುಖ ನಾಟಕವೊಂದು ಪ್ರದರ್ಶನಗೊಳ್ಳಲಿದೆ. ಅದೂ ಮತ್ತೊಂದು ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡ ರಂಗಾಯಣದ ಕಲಾವಿದರು ಅಭಿನಯಿಸಿರುವ ಜಡಭರತರ ನಾಟಕ ‘ಸತ್ತವರ ನೆರಳು’ ಇಂದು (ಶನಿವಾರ) ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಳ್ಳಲಿದೆ.

ರಂಗಾಯಣದಲ್ಲಿಯೇ ಮೂರೂವರೆ ದಶಕ ಕಾಲ ಕಲಾವಿದ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಹುಲುಗಪ್ಪ ಕಟ್ಟೀಮನಿಯವರು ನಿರ್ದೇಶಿಸಿರುವ ನಾಟಕವಿದು.  ಅಲ್ಲಿ ಇಬ್ಬರು,ಒಬ್ಬ ಕುರುಡ, ಅವನ ಹೆಂಡತಿ ಒಟ್ಟಾಗಿ ಹಾಡು ಹಾಡುತ್ತಾರೆ. ಕತೆಯ ಹಿಂದಿನ ವಾಸ್ತವದ ಕತೆಯನ್ನೂ ತಿಳಿದಷ್ಟು ನಿರೂಪಿಸುತ್ತ ಹೋಗುತ್ತಾರೆ. ಬಹಳ ಅರ್ಥ ಪೂರ್ಣ ಜೋಡಿಯು ಕೂಡ ಇವರು.

ಒಂದು ವಿಚಿತ್ರ ಸಂಕೇತವೇ ಅಲ್ಲಿ ಕ್ರಿಯೇಟ್ ಆಗಿದೆ. ಆತ ಕುರುಡ. ಅವನಿಗೆ ಆಧಾರಕ್ಕೆ ಅವನ ಸಖಿಯೂ ಇದ್ದಾಳೆ. ಆದರೂ ಆತ ಕಂದೀಲು ಹಿಡಿದಿದ್ದಾನೆ. ಕುರುಡನಿಗೆ ಕಂದೀಲು ಉಪಯುಕ್ತ ಅಲ್ಲ ಎನಿಸುತ್ತದೆ. ಆದರೆ ಇನ್ನೊಂದು ಅರ್ಥದಲ್ಲಿ ಕಂದೀಲು ನಿಜವಾಗಿ ಉಪಯುಕ್ತ ಆಗೋದು ಕುರುಡನಿಗೇನೇ. ಏಕೆಂದರೆ ಅವನ ಬಳಿ ಕಂದೀಲು ಇರದಿದ್ದರೆ ಲೋಕದ ಕಣ್ಣು ಇದ್ದ ಜನರು ಇಲ್ಲೊಬ್ಬ ಕುರುಡ ಹೋಗುತ್ತಿದ್ದಾನೆ ಅನ್ನೋದನ್ನು ತಿಳಿಯದೆ ಹಾಯ ತಾ ಹೋಗುತಿದ್ದರು. ಅಂದರೆ ಕುರುಡ ಕಂದೀಲು ಹಿಡಿಯುವುದು ತನಗಾಗಿ ಅಲ್ಲ. ತನ್ನ ಸುತ್ತಲೂ ಕಣ್ಣು ಇದ್ದೂ ಕಣ್ಣು ಇಲ್ಲದವರಂತೆ ಬದುಕಿರೋ ಸಾರ್ವಜನಿಕರಿಂದ ತಾನು ಸುರಕ್ಷಿತ ಆಗಿರಲು. ಆತನ ಕೈಯಲ್ಲಿ ಕಂದೀಲು ಇರದಿದ್ದರೆ ದಾರಿಯ ಕಣ್ಣಿ ದ್ದ ಜನರೂ ಇವನಿಗೆ ಹಾಯ್ದು ಇವನನ್ನು ಇನ್ನಷ್ಟು ತೊಂದರೆಗೆ ಇಡು ಮಾಡುತ್ತಿದ್ದರು.

ದಿವಾನ್ ಕೃಷ್ಟಾ ಚಾರ್ಯರಿಗೆ ಇಡೀ ವೃಂದಾವನವೇ ಒಂದು ಕಂದೀಲು. ಅವರು ಅನೇಕ ನೆಲೆಗಳಲ್ಲಿ ಕುರುಡರು. ಪ್ರಜ್ಞಾ ಪೂರ್ವಕವಾಗಿಯೇ ಕುರುಡು ಬದುಕನ್ನು ಬಾಳ್ತಾ ಇರೋರು. ವೃಂದಾವನ ಅನ್ನೋ ಕಂದೀಲು ಅವರ ಕೈಯಲ್ಲಿ ಇರೋದರಿಂದ ಅವರು ಯಾರೂ ಇವರಿಗೆ ಎದುರು ಬಂದು ಹಾಯದಂತೆ ಸೇಫ್ ಆಗಿ ಇದ್ದಾರೆ. ಈ ಬೃಹತ್ ಕಣ್ಣಿದ್ದೂ ಕುರುಡರ ಹಾಯುವಿಕೆಯಿಂದ ತಾವು ಸೇಫ್ ಆಗಿ ಉಳಿಯಲು ವೃಂದಾವನ ಅನ್ನೋ ಕಂಡೀಲನ್ನು ಹಿಡಿದು ಯಾರೂ ಎದುರು ಬಂದರೂ ಅವರಿಂದ ಏನೂ ತೊಂದರೆ ಆಗದಂತೆ ಅವರು ಬದುಕಿದ್ದಾರೆ. ಆ ವೃಂದಾವನ ಅನ್ನೋ ಗಾಜಿನ ಗ್ಲಾಸ್ ಇರೋ ಸೂಕ್ಷ್ಮ ಕಂಡೀಲನ್ನು ಯಾರೂ ವಿರೋಧಿಸದಂತೆ ನೋಡಿ ಕೊಳ್ಳೋದು ಅವರ ಸ್ವ ಧರ್ಮವೇ ಆಗಿದೆ.

ಇದನ್ನೆಲ್ಲಾ ನಿರ್ದೇಶಕರು ಆವಾಹನ ಮಾಡಿಕೊಂಡೆ ರಂಗಚಿತ್ರವನ್ನು ಬಿಡಿಸಿದ್ದಾರೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಆ ಸಖ ಸಖಿಯರ ಆಪ್ತತೆಯ ನೆಲೆಯಲ್ಲಿ ಅವರ ಕೈಯಲ್ಲಿ ಒಂದು ಕಂದೀಲು ಇರೋದು ಒಂದು ಸುಂದರ ದೃಶ್ಯ ರೂಪಕವಾಗಿದೆ ಎಂದು ಹಿರಿಯ ಲೇಖಕ  ಆನಂದ ಜಂಜರವಾಡ ಅವರು “ಸತ್ತವರ ನೆರಳು”. ನಾಟಕದ ಬಗ್ಗೆ ಬರೆದಿದ್ದಾರೆ.

Key words:  Sattavara neralu, play, Rangayana, Mysore