ಮೈಸೂರು,ಡಿಸೆಂಬರ್,15,2020(www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಕರ್ನಾಟಕದ ರೈತರ ಪರವಾಗಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರ ಸಭೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ದೆಹಲಿಯಲ್ಲಿ ದಿನಗಳಿಂದ ಕೊರೆಯುವ ಚಳಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಹದಿನಾಲ್ಕು ಜನ ರೈತರು ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರು ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸದೆ, ವಿಳಂಬ ಮಾಡುವ ಮೂಲಕ ಚಳುವಳಿ ದಿಕ್ಕುತಪ್ಪಿಸಲು ಯತ್ನಿಸುತ್ತಿರುವುದು ಸರಿಯಲ್ಲ,
ದೇಶದ ರೈತರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ….
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಕ್ಕಾಗಿ ಕಾಯ್ದೆ ಜಾರಿಗೆ ತರಲಾಗಿದೆ ಎನ್ನುತ್ತಾರೆ, ಆದರೆ ರೈತರ ಹೋರಾಟ ತೀವ್ರವಾಗುತ್ತಿದ್ದಂತೆ ತಿದ್ದುಪಡಿ ಮಾಡಲು ಮುಂದಾಗುತ್ತಾರೆ ಇದರಿಂದಲೇ ತಿಳಿಯಬೇಕು ಕಾಯ್ದೆಯಲ್ಲಿ ಲೋಪ ದೋಷವಿದೆ ಎಂಬುದನ್ನು, ಕಲ್ಲಿದ್ದಲು ವಿಮಾನಯಾನ ರೈಲ್ವೆ ಟೆಲಿಕಾಂಗಳನ್ನು ಖಾಸಗಿ ವ್ಯವಸ್ಥೆಗೆ ಮಾರಲಾಗಿದೆ. ಈಗ ದೇಶದ ರೈತರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ, ಅದಕ್ಕಾಗಿಯೇ ದೇಶದ ರೈತರು ಜಾಗೃತರಾಗಿ ಬೀದಿಗಿಳಿದಿದ್ದಾರೆ, ವಿರೋಧಪಕ್ಷಗಳು ರೈತ ಹೋರಾಟವನ್ನು ಬೆಂಬಲಿಸಿದರೆ ಆಡಳಿತ ಪಕ್ಷಕ್ಕೆ ಆಗುವ ನಷ್ಟವೇನು ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.
ರಾಜ್ಯದ ರೈತ ದಲಿತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ, ಈ ಹೋರಾಟದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ , ಸರ್ಕಾರಗಳ ವೈಫಲ್ಯದಿಂದ ನಾವು ಚಳುವಳಿ ದಾರಿ ಹಿಡಿಯಬೇಕಾಗಿದೆ ಎಂದು ತಿಳಿಸಿದರು.
ಇಂದು ನಡೆದ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ, ರಾಜಣ್ಣ, ಅಂಕಪ್ಪ, ಪರಶಿವಮೂರ್ತಿ ಮಹಿಳಾ ಸಂಚಾಲಕಿ ರಾಣಿ, ಬರಡನಪುರ ನಾಗರಾಜ್, ಆಡ್ಯರವಿ, ಪ್ರಸಾದ್ ನಾಯಕ್ ಮಂಜುನಾಥ್, ಕೆ.ಜಿ ಎಸ್ ಗುರುಸ್ವಾಮಿ, ರಾಮೇಗೌಡ, ಕೃಷ್ಣೆಗೌಡ, ರಾಜು ಹೆಗ್ಗೂರ್ ರಂಗರಾಜ್, ಮುಂತಾದವರು ಇದ್ದರು.
Key words: Satyagraha- tomorrow’-farmers-mysore- farmer leader-Kuruburu Shanthakumar.