ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಸರ್ವಾಧಿಕಾರ ದಬ್ಬಾಳಿಕೆ ನಿಲ್ಲಿಸಿ- ವಾಟಾಳ್ ನಾಗರಾಜ್ ಆಗ್ರಹ

ಮೈಸೂರು, ಅಕ್ಟೋಬರ್,2,2024 (www.justkannada.in): ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಖಂಡನೀಯ‌. ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಸರ್ವಾಧಿಕಾರ ದಬ್ಬಾಳಿಕೆ ನಿಲ್ಲಿಸಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ‌ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.

ನಗರದ ಹಾರ್ಡಿಂಗ್ ವೃತ್ತದಲ್ಲಿ ವಾಟಾಳ್ ನಾಗರಾಜ್ ಸತ್ಯಾಗ್ರಹ ನಡೆಸಿದರು. ಸತ್ಯಾಗ್ರಹಕ್ಕೂ ಮುನ್ನ ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ವಾಟಾಳ್ ನಾಗರಾಜ್ ಪುಷ್ಪಾರ್ಚನೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ರಾಜಭವನ ರಾಜಕೀಯ ಭವನ ಆಗಬಾರದು‌. ರಾಜಭವನ ಹೆಸರು ಬದಲಾವಣೆ ಮಾಡಿ ಪ್ರಜಾಭವನ ಎಂದು ಕರೆಯಬೇಕು. ರಾಜ್ಯಪಾಲರ ಪ್ರಜಾ ವಿರೋಧಿ ನೀತಿ ಬದಲಾಗಬೇಕು. ಕೇಂದ್ರದ ಅಧೀನ ಸಂಸ್ಥೆಗಳನ್ನು ದುರ್ಬಳಕೆ ಮಾಡಬಾರದು ಎಂದರು.

ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿಗಳನ್ನು ಜೈಲಿನಲ್ಲಿಡುವ ಸಂಸ್ಕೃತಿ ಆರಂಭವಾಗಿದೆ. ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರ ದಬ್ಬಾಳಿಕೆ ನಡೆಯುತ್ತಿದೆ. ಆದ್ದರಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಸರ್ವಾಧಿಕಾರಿ ದಬ್ಬಾಳಿಕೆ ನಿಲ್ಲಿಸುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿದರು.

Key words: Save, democratic, system, Vatal Nagaraj, mysore