ಮೈಸೂರು,ಫೆಬ್ರವರಿ,26,2021(www.justkannada.in) : ಎಸ್ಸಿ,ಎಸ್ಟಿ ಕೈಗಾರಿಕೋದ್ಯಮಿಗಳಿಗೆ ಸಬ್ಸಿಡಿ ನೀಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಎಸ್ಸಿ,ಎಸ್ಟಿ ಕೈಗಾರಿಕೋಧ್ಯಮಿಗಳ ಹೋರಾಟ ಸಮಿತಿ ಸಂಚಾಲಕ ನರಸಿಂಹಮೂರ್ತಿ ಆಕ್ರೋಶವ್ಯಕ್ತಪಡಿಸಿದರು.
ಪತ್ರಕರ್ತರ ಭವನದಲ್ಲಿ ಎಸ್ಸಿ,ಎಸ್ಟಿ ಕೈಗಾರಿಕೋಧ್ಯಮಿಗಳ ಹೋರಾಟ ಸಮಿತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ,ಎಸ್ಟಿ ಉದ್ಯಮಿಗಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, KIADB ಅಧಿಕಾರಿಗಳು ವಿನಃ ಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಆಯ್ದ ಎಸ್ಸಿ,ಎಸ್ಟಿ ಫಲಾನುಭವಿಗಳಿಗೆ ನಿವೇಶನ ನೀಡದೆ ವಿಳಂಬ ಮಾಡಲಾಗಿದೆ. ಜೊತೆಗೆ ನಿವೇಶನಕ್ಕಾಗಿ ಹಾಲಿ ಇರುವ ಸಹಾಯಧನವನ್ನು ಶೇ.೫೦ ರಿಂದ ಶೇ.೭೫ ಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಆದರೆ, KIADB ಅಧಿಕಾರಿಗಳು ತಡೆಹಿಡಿಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಕೂಡಲೆ ಸಬ್ಸಿಡಿ ಆದೇಶ ಜಾರಿಗೊಳಿಸಿ ನಿಯಮಾನುಸಾರ ನಿವೇಶನ ನೀಡದಿದ್ದಲ್ಲಿ KIADB ಕಚೇರಿ ಎದುರು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಹ ಸಂಚಾಲಕ ದ್ಯಾವಪ್ಪ ನಾಯಕ ಇತರರು ಭಾಗವಹಿಸಿದ್ದರು.
key words : SC, ST-industrialists-Subsidy-give-delay-Outrage