ಬೆಂಗಳೂರು,ಅಕ್ಟೋಬರ್,8,2022(www.justkannada.in): ಮೀಸಲಾತಿ ಕೊಡಿಸುವ ವಿಚಾರದಲ್ಲಿ ಗೇಲಿ ಮಾಡಿದ್ದರು. ಆದರೆ ನನ್ನ ಹೋರಾಟ ನಿಲ್ಲಲಿಲ್ಲ. ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ನುಡಿದರು.
ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿದ್ದು ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದರು.
ಮೀಸಲಾತಿ ಬಗ್ಗೆ ಹಲವು ಬಾರಿ ಹೇಳಿದ್ದೆ. ಆದರೆ ನನಗೆ ಗೇಲಿ ಮಾಡಿದ್ರು. ರಕ್ತದಿಂದ ಬರುದುಕೊಡ್ತಾನೆ ಅದ್ರೂ ಏನು ಆಗಲಿಲ್ಲ ಎಂದು ಗೇಲಿ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬೈಸಿಕೊಂಡು ಸಾಕಾಗಿತ್ತು. ನನ್ನ ಬಂಧುಗಳು ಕೂಡ ನನಗೆ ಬೈದಿದ್ದರು. ಆದರೆ ಮೀಸಲಾತಿಗಾಗಿ ನನ್ನ ಹೋರಾಟ ನಿಲ್ಲಲಿಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
Key words: SC-ST-reservation-Minister -Shriramulu.