ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಶಾಲೆ ಮಕ್ಕಳಿದ್ದ ವ್ಯಾನ್ ಪಲ್ಪಿ

ಚಿಕ್ಕಮಗಳೂರು,ಡಿಸೆಂಬರ್,21,2024 (www.justkannada.in): ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ತೆರಳಿದ್ದ ಮೈಸೂರು ಮೂಲದ ಶಾಲಾ ಮಕ್ಕಳಿದ್ದ ವ್ಯಾನ್ ಪಲ್ಟಿಯಾಗಿ ಐವರು ಮಕ್ಕಳು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳಿದ್ದ ವ್ಯಾನ್ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ. 12 ಜನ ಮಕ್ಕಳಲ್ಲಿ 5 ಜನ ಮಕ್ಕಳಿಗೆ ಗಾಯಗಳಾಗಿದ್ದು ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ಶಾಲಾ ಮಕ್ಕಳು ಸರ್ಕಾರಿ ಬಸ್ ನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಚಿಕ್ಕಮಗಳೂರಿನಲ್ಲಿ ಟ್ರ್ಯಾಕ್ ಗಾಡಿಯನ್ನ ಬಾಡಿಗೆ ಮಾಡಿಕೊಂಡಿದ್ದರು. ಈ ನಡುವೆ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಟ್ರ್ಯಾಕ್ಸ್ ಹೊರಟಿತ್ತು. ಈ ವೇಳೆ ವ್ಯಾನ್ ಪಲ್ಟಿಯಾಗಿದೆ.

ಮಕ್ಕಳನ್ನ ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಲಾಗಿದ್ದು, ಮುಳ್ಳಯ್ಯನಗಿರಿಯ ಎತ್ತರದ ಪ್ರದೇಶದಲ್ಲಿ ಘಟನೆಯಾಗಿದ್ರೆ ದೊಡ್ಡ ಅನಾಹುತವಾಗುತಿತ್ತು.

Key words: Mysore, school children,  accident, Chikkamagalore