ಬೆಂಗಳೂರು,ಫೆಬ್ರವರಿ,1,2021(www.justkannada.in): ಇಂದಿನಿಂದ ಶಾಲೆ-ಕಾಲೇಜುಗಳು ಪೂರ್ಣಾವಧಿ ತರಗತಿಗಳು ಪ್ರಾರಂಭವಾಗಲಿದೆ.
9,10 ನೇ ತರಗತಿ ಹಾಗೂ ಪದವಿ, ಪದವಿ ಪೂರ್ವ ಕಾಲೇಜುಗಳಲ್ಲಿ ಪೂರ್ಣಾವಧಿ ತರಗತಿ ಪ್ರಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಜನವರಿ 1 ರಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳನ್ನು ಆರಂಭಿಸಿದೆ.
ಈ ಮಧ್ಯೆ ಇಂದಿನಿಂದ 9 ಮತ್ತು ಪ್ರಥಮ ಪಿಯುಸಿ ತರಗತಿಗಳು ಕೂಡ ಆರಂಭವಾಗಲಿದ್ದು, ಇಂದಿನಿಂದ 9 ರಿಂದ 12 ನೇ ತರಗತಿಗಳಿಗೆ ಪೂರ್ಣಪ್ರಮಾಣದಲ್ಲಿ ಶಾಲೆ-ಕಾಲೇಜುಗಳು ನಡೆಯಲಿವೆ. ಪೋಷಕರ ಅನುಮತಿ ಕಡ್ಡಾಯಗೊಳಿಸಲಾಗಿದ್ದು, ಆದರೆ ಹಾಜರಾತಿ ಕಡ್ಡಾಯವಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇನ್ನು 6 ರಿಂದ 8 ನೇ ತರಗತಿವರೆಗೆ ಹಿಂದಿನಂತೆ ವಿದ್ಯಾಗಮ ಮುಂದುವರೆಯಲಿದ್ದು, ಶಿಕ್ಷಣ ಇಲಾಖೆಯಿಂದ 8 ,9,10 ತರಗತಿ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ವೇಳಾಪಟ್ಟಿಯಂತೆ ತರಗತಿ ನಡೆಸಲು ಸೂಚನೆ ನೀಡಿದೆ.
Key words: School-college -full-time –classes- start- today.