ಮೈಸೂರು, ಅಕ್ಟೋಬರ್,3,2020(www.justkannada.in): ಕೊರೋನಾ ನಡುವೆ ಅಕ್ಟೋಬರ್ 15 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಕುರಿತು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ ದೇವೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸದ್ಯಕ್ಕೆ ಶಾಲೆ ತೆರೆಯುವ ವಿಚಾರವನ್ನ ಸರ್ಕಾರ ಕೈಬಿಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು. ಕೊರೋನಾ ಬಂದು ಆರು ತಿಂಗಳು ಎಲ್ಲಾ ಬಂದ್ ಆಗಿತ್ತು. ಆಗ ನಾವು ಏನನ್ನು ಕಳೆದುಕೊಂಡಿಲ್ಲ. ಈಗ ಶಾಲೆ ತೆರೆಯಲಿಲ್ಲ ಅಂದರು ನಾವು ಏನು ಕಳೆದುಕೊಳ್ಳಲ್ಲ.
ಒಂದು ವೇಳೆ ಶಾಲೆ ಓಪನ್ ಮಾಡುದ್ರೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ.ಹೀಗಾಗಿ ಸರ್ಕಾರ ಸದ್ಯಕ್ಕೆ ಶಾಲೆ ತೆರೆಯುವ ವಿಚಾರವನ್ನ ಕೈಬಿಡಬೇಕು ಎಂದು ಜಿ.ಟಿ ದೇವೇಗೌಡ ಸಲಹೆ ನೀಡಿದ್ದಾರೆ.
Key words: School-College –re open-advised – government-former minister-GT Deve Gowda