ಮಂಗಳೂರು, ಫೆ.15, 2020 : (www.justkannada.in news ) ಕಿತ್ತಳೆ ಹಣ್ಣು ವ್ಯಾಪಾರಿ, ಅಕ್ಷರಸಂತ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರ ನ್ಯೂ ಪಡ್ಪು ಸರಕಾರಿ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶನಿವಾರ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು…
ಅಕ್ಷರಸಂತ ಎಲೆಮರೆಯ ಕಾಯಿಯಾಗೇ ಉಳೀತಾ ಇದ್ರೂ, ಪತ್ರಕರ್ತ ಗುರುವಪ್ಪ ಪರಿಚಯಿಸದೇ ಇದ್ದಲ್ಲಿ ಹಾಗೇ ಉಳೀತಾ ಇದ್ರೂ. ನಟ ದರ್ಶನ್, ಸುದೀಪ್, ಸಲ್ಮಾನ್ ಖಾನ್ ಹಾಜಬ್ಬರಿಗೆ ಸಮಾನರಲ್ಲ, ಇವರೇ ನಿಜವಾದ ಹೀರೋ.
ಆರು ತಿಂಗಳ ಅವಧಿಯಲ್ಲಿ ಇಂತಹ ಕಾರ್ಯಕ್ರಮ ಪ್ರಥಮವಾದುದು. ಶಾಲೆಯ ರಾಯಭಾರಿಗಳಾದ ೧೦ ನೇ ತರಗತಿ ವಿದ್ಯಾರ್ಥಿಗಳು, ಉತ್ತಮ ಫಲಿತಾಂಶ ದಾಖಲಿಸಿದಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುತ್ತಾರೆ. ಆದ್ದರಿಂದ ಹಾಜಬ್ಬ ಕನಸ್ಸನ್ನು ನನಸು ಮಾಡಿ ಮಕ್ಕಳೇ.
ಇಡೀ ಸಮಾಜ ಹಾಜಬ್ಬ ಎದುರು ತಲೆತಗ್ಗಿಸಬೇಕಿದೆ. ನನ್ನದು ನನಗೆ, ನಿನ್ನದು ನಿನಗೇ ಎಂಬಂತೆ ಸಮಾಜ ನಡೆಯುತ್ತಿದೆ, ಆದರೆ, ನಿನ್ನದು ನಿನಗೇ, ನನ್ನದೂ ನಿನಗೇ ಅನ್ನುವ ಹಾಜಬ್ಬ ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆ.
ಹಾಜಬ್ಬ ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಪಬ್ಲಿಕ್ ಸ್ಕೂಲ್, ಪಿಯುಸಿ, ಕಾಂಪೌಂಡ್, ಶಿಥಿಲ ಕಟ್ಟಡ ದುರಸ್ತಿಗೆ ಪ್ರಮಾಣಿಕ ಪ್ರಯತ್ನ ನಡೆಸುವೆ.
key words ; school-hajabba-sureshkumar-education-minister-mangalore