ಮೈಸೂರು,ಜೂನ್,17,2021(www.justkannada.in): ಶಾಲೆಯನ್ನೂ ಉಳಿಸಿ ಸ್ಮಾರಕವನ್ನೂ ನಿರ್ಮಾಣ ಮಾಡುವಂತೆ ಎನ್.ಟಿ.ಎಂ.ಎಸ್ ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಮೈಸೂರಿನ ಎನ್.ಟಿ.ಎಂ.ಎಸ್ ಶಾಲೆ ಮುಂಭಾಗ ಶಾಲೆ ಉಳಿಸಿ ಎಂಬ ನಾಮಫಲಕ ಹಿಡಿದು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಸಂಬಂಧ ಜಿಲ್ಲಾಧಿಕಾರಿಗಳ ವರದಿ ಜಾರಿಗೆ ಆಗ್ರಹಿಸಿದರು.
ಶಾಲೆ ಜಾಗವನ್ನು ಹಾಗೆಯೇ ಉಳಿಸಿ, ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಿ. ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಿ. ವಿವೇಕಾನಂದರು ಶಾಲೆ ಕೆಡವಿ ಸ್ಮಾರಕ ನಿರ್ಮಿಸುವಂತೆ ಎಲ್ಲೂ ಹೇಳಿಲ್ಲ. ಹಾಗೇನಾದರೂ ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡಿದರೆ ವಿವೇಕಾನಂದರ ಆಶಯಗಳಿಗೆ ವಿರುದ್ಧವಾಗುತ್ತದೆ. ಕನ್ನಡ ಶಾಲೆಯ ಸಮಾಧಿ ಮೇಲೆ ವಿವೇಕ ಸ್ಮಾರಕ ಬೇಡ. ಹೀಗಾಗಿ ಕೂಡಲೇ ಸರ್ಕಾರ ಇದನ್ನ ಪುನರ್ ಪರಿಶೀಲಿಸಬೇಕು. ಶಾಲೆಯನ್ನೂ ಉಳಿಸಿ ಸ್ಮಾರಕ ನಿರ್ಮಾಣ ಮಾಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.
Key words: School- Monument-mysore- NTMS school -protest