ಮೈಸೂರು,ಡಿಸೆಂಬರ್,24,2020(www.justkannada.in): ಜನವರಿ 1 ರಿಂದ ಶಾಲೆ ಆರಂಭ ಬೇಡ. ಸಂಕ್ರಾಂತಿ ನಂತರ ಶಾಲೆಗಳನ್ನ ಆರಂಭಿಸಿ ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಸ್ವಪಕ್ಷದವರಾದ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ದವೇ ಕಿಡಿಕಾರಿದ ಬಿಜೆಪಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸುರೇಶ್ ಕುಮಾರ್ ಆದೇಶ ಮಾಡುತ್ತಾರೆ. ನಂತರ ವಾಪಸ್ ಪಡೆಯುತ್ತಾರೆ. ಅವರಿಗೆ ಮಾತು ವಾಪಸ್ ಪಡೆಯೋ ಖಾಯಿಲೆ ಇದ್ದಂತಿದೆ. ಸುರೇಶ್ ಕುಮಾರ್ ಹೇಳಿರುವುದು ಒಂದಾದರೂ ಆಗಿದೆಯೇ…? ಮಕ್ಕಳು ಮನೆಯ ಆಸ್ತಿ. ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ.
ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಹೀಗಾಗಿ ಜನವರಿ 1ರಿಂದ ಶಾಲೆ ಆರಂಭ ಬೇಡ. ಸಂಕ್ರಾಂತಿ ಬಳಿಕ ಶಾಲೆ ಆರಂಭಿಸಿ ಎಂದರು.
ನೈಟ್ ಕರ್ಫ್ಯೂ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ಹೊಸ ವರ್ಷಾಚರಣೆಗೆ ಜನ ಸೇರುತ್ತಾರೆ. ಹೀಗಾಗಿ ಡಿಸೆಂಬರ್ 30 ಮತ್ತು 31 ರಂದು ನೈಟ್ ಕರ್ಫ್ಯೂ ಜಾರಿ ಮಾಡಿ. ಆದರೆ ಈಗೆ ಏಕೆ…? ಎಂದು ಪ್ರಶ್ನಿಸಿದರು. ನೈಟ್ ಕರ್ಫ್ಯೂ ಪುನರ್ ಪರಿಶೀಲಿಸಬೇಕು. ನಾನು ಸರ್ಕಾರದ ಪರವಾಗಿ ನೈಟ್ ಕರ್ಫ್ಯೂ ಸರಿ ಇದೆ ಎನ್ನಬಹುದು . ಆದರೆ ಜನ ಅದನ್ನ ಜೋಕ್ ಆಗಿ ತೆಗೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
Key words: school- No starts – January 1- MLC- H.Vishwanath – against -Education Minister- Suresh Kumar