ಬೆಂಗಳೂರು, ನವೆಂಬರ್,5,2020(www.justkannada.in): ರಾಜ್ಯದಲ್ಲಿ ಶಾಲೆಗಳ ಆರಂಭಿಸುವ ಕುರಿತು ಚರ್ಚಿಸಲು ನಾಳೆ ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಶಿಕ್ಷಕರ ಜತೆ ಶಿಕ್ಷಣ ಇಲಾಖೆ ವಿಡಿಯೋ ಕಾನ್ಪರೆನ್ಸ್ ಆಯೋಜಿಸಿದೆ.
ನಾಳೆ ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ರಾಜ್ಯದ ಆಯಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸ್ವೀಕೃತಿ ಕೇಂದ್ರಗಳಲ್ಲಿ 2020-21ನೇ ಸಾಲಿನಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಅಭಿಪ್ರಾಯ ಸಂಗ್ರಹಿಸಲು ವಿಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿದೆ.
ನಾಳೆ ಮಧ್ಯಾಹ್ನ 03:00 ರಿಂದ 04-00ರವರೆಗೆ ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ಮತ್ತು ಸಂಜೆ 4ರಿಂದ 5-30ರವರೆಗೆ ಬೆಂಗಳೂರು ಮತ್ತು ಮೈಸೂರು ವಿಭಾಗಕ್ಕೆ ವಿಡಿಯೋ ಕಾನ್ಫರೆನ್ಸ್ ಸಭೆ ಆಯೋಜನೆ ಮಾಡಲಾಗಿದೆ. ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರತಿ ತಾಲ್ಲೂಕಿನಿಂದ ಗ್ರಾಮೀಣ ಭಾಗದ ಒಬ್ಬರು ಎಸ್.ಡಿಎಂಸಿ ಅಧ್ಯಕ್ಷರು ಸದಸ್ಯರು ಮತ್ತು ನಗರ ಪ್ರದೇಶದಿಂದ ಒಬ್ಬರು ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು ಪಾಲ್ಗೊಳ್ಳಲು ಅವಕಾಶವಿದೆ.
ಹಾಗೆಯೇ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ, ಉಪನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಆಭಿವೃದ್ದಿ) ವಿಡಿಯೋಕಾನ್ಪರೆನ್ಸ್ ನಲ್ಲಿ ಪಾಲ್ಗೊಳ್ಳಲಿದ್ದು ಸಭೆಯಲ್ಲಿ ಶಾಲೆಗಳನ್ನ ಆರಂಭಿಸಲು ದಿನಾಂಕಗಳನ್ನ ನಿಗದಿಪಡಿಸುವ ಬಗ್ಗೆ ಶಾಲೆಗಳ ಆರಂಭಿಸುವ ಮೊದಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಶಾಲೆಗಳು ನಡೆಯುವ ಅವಧಿ ನಿಗದಿಪಡಿಸುವ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮಂಡಿಸುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ.
Key words: School –opening- issue – state-Video Conferencing -tomorrow.