ಮೈಸೂರು,ಸೆಪ್ಟಂಬರ್,6,2021(www.justkannada.in): ಕೊರೋನಾ 3ನೇ ಅಲೆ ಭೀತಿ ನಡುವೆ ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭವಾಗಿದ್ದು, ಈ ಮಧ್ಯೆ ಮೈಸೂರಿನಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು.
ಸ.ಹಿ.ಪ್ರಾ.ಶಾಲೆ ರೈಲ್ವೆ ಕಾರ್ಯಾಗಾರ ಇಲ್ಲಿ ಮೈಸೂರು ಜಿಲ್ಲಾ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಹಾಗೂ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ರಾಮಾರಾಧ್ಯ ರವರ ಉಪಸ್ಥಿತಿಯಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ವಿಭಿನ್ನವಾದ ಮತ್ತು ಉತ್ತಮವಾದ ಕೊಠಡಿ ವ್ಯವಸ್ಥೆಗಳನ್ನು ಹೊಂದಿರುವ ಈ ಶಾಲೆಯಲ್ಲಿ ಪ್ರಸ್ತುತ 71 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಸಾಲಿಗಿಂತ 17 ಮಕ್ಕಳ ದಾಖಲಾತಿ ಹೆಚ್ಚಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ಮಕ್ಕಳಿಗೂ ಪಠ್ಯ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿಲಾಯಿತು.
ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ, ನೌಕರರ ಸಂಘದ ಉಪಾದ್ಯಕ್ಷ ಮಾಲಂಗಿ ಸುರೇಶ್, ಬಿ.ಆರ್.ಸಿ ನಾಗೇಶ್, ಬಿ.ಆರ್.ಪಿ. ಶ್ರೀಕಂಠ ಶಾಸ್ತ್ರಿ, ಸಿ.ಆರ್.ಪಿ.ಅರ್.ರಾಜು, ದಕ್ಷಿಣ ವಲಯ ಶಿಕ್ಷಕರ ಸಂಘದ ಕಾರ್ಯದರ್ಶಿ ಹರ್ಷ ಹಾಗೂ ಶಾಲಾ ಶಿಕ್ಷಕವೃಂದದವರು ಹಾಜರಿದ್ದರು.
Key words: school- start- grand welcome – children – Mysore