ಬೆಂಗಳೂರು,ಡಿಸೆಂಬರ್,19,2020(www.justkannada.in) : ಶಾಲಾ ಆವರಣದಲ್ಲಿ ಮಾತ್ರ 3 ದಿನ ವಿದ್ಯಾಗಮ ನಡೆಸಲು ನಿರ್ಧಾರ. ಒಂದು ಕೊಠಡಿಯಲ್ಲಿ 15 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಕಡ್ಡಾಯವಾಗಿ ಸರ್ಕಾರಿ ಶಾಲೆಗಳ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಎಲ್ಲಾ ಸರ್ಕಾರಿ ಶಾಲೆಗಳ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಬೋರ್ಡ್ ಎಕ್ಸಾಂ ಇರುವುದರಿಂದ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಶೀತ, ನೆಗಡಿ ಇಲ್ಲವೆಂದು ಪೋಷಕರಿಂದ ಪತ್ರ ತರಬೇಕು ಎಂದಿದ್ದಾರೆ.
ವಿದ್ಯಾಗಮಕ್ಕೆ ಬಳಸುವ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಖಾಸಗಿ ಶಾಲೆಗಳಲ್ಲು ವಿದ್ಯಾಗಮ ಆರಂಭ ಮಾಡಬೇಕು. ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲೆಬೇಕು ಎಂದು ಪೋಷಕರ ಒತ್ತಾಯವಿಲ್ಲ. ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳ ಆರಂಭ ಮಾಡಲಾಗುವುದು. ತರಗತಿ ಎಷ್ಟು ಅವಧಿ ನಡೆಸಬೇಕು ಎಂಬುದಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮನೆಗಳಿಗೆ ಫುಡ್ ಕಿಟ್ ಗಳ ವಿತರಣೆ ಮಾಡಲಾಗುವುದು. ಜನವರಿ 1ರಿಂದ ತರಗತಿಗಳು ಆರಂಭವಾಗಲಿದ್ದು, 6 ರಿಂದ 9ನೇ ತರಗತಿಯವರೆಗೆ ನಡೆಯಲಿದೆ. ಉಳಿದ ತರಗತಿಗಳ ಪಾಸ್, ಫೇಲ್ ಬಗ್ಗೆ ನಿರ್ಧಾರ ಮಾಡಲಾಗುವುದು. ಮಕ್ಕಳಿಗೆ ಯಾವುದೇ ಅಪಾಯ ವಾಗದಂತೆ ನೋಡಿಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
key words : School-premises-Only-Up -15 people-room-Minister-Suresh Kumar