ಬೆಂಗಳೂರು, ಫೆ.22, 2022 : (www.justkannada.in news ) ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ಮತ್ತು ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2021ನೇ ಸಾಲಿನ ಚಿನ್ನದ ಪದಕ ಸಹಿತ `ಸಿಎನ್ಆರ್ ರಾವ್ ಜೀವಮಾನ ಸಾಧನೆ ಪುರಸ್ಕಾರ’ ಮತ್ತು ನಿಟ್ಟೆ ವಿ.ವಿ.ಯ ಡಾ.ಇದ್ಯಾಕರುಣಾ ಸಾಗರ್ ಅವರಿಗೆ `ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಂಗಳವಾರ ಪ್ರದಾನ ಮಾಡಿದರು.
ಇಲ್ಲಿನ ಜಿಕೆವಿಕೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಕೆ.ವಿಜಯರಾಘವನ್, ಉದ್ಯಮಿ ಕಿರಣ್ ಮಜುಂದಾರ್ ಷಾ, ಲೇಖಕಿ ಸುಧಾ ಮೂರ್ತಿ, ಮೈಸೂರು ವಿವಿ ಕುಲಪತಿ ಪ್ರೊ,ಹೇಮಂತಕುಮಾರ್, ಗುಲ್ಬರ್ಗ ವಿವಿ ಕುಲಪತಿ ದಯಾನಂದ ಅಗಸರ್, ಡಿಆರ್ ಡಿಒ ವಿಜ್ಞಾನಿ ಟೆಸ್ಸೀ ಥಾಮಸ್ ಸೇರಿದಂತೆ 40ಕ್ಕೂ ಹೆಚ್ಚು ವಿಜ್ಞಾನ ಸಾಧಕರಿಗೆ ಅಕಾಡೆಮಿಯ ಫೆಲೋಶಿಪ್ ಕೂಡ ಪ್ರದಾನ ಮಾಡಲಾಯಿತು.
ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಸಚಿವರು, ವಿಜ್ಞಾನವು ನಮ್ಮಲ್ಲಿ ಕೇವಲ ಮೇಲ್ತುದಿಯಲ್ಲಿರುವವರಿಗೆ ಮಾತ್ರ ಸಿಕ್ಕುತ್ತಿದೆ. ಮಹತ್ತ್ವದ ಸಂಶೋಧನೆಗಳು ಸಮಾಜದ ತಳ ಸ್ತರಕ್ಕೆ ತಲುಪದೆ ಇದ್ದರೆ ಪ್ರಯೋಜನವಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಮಾದರಿಗಳ ಬಗ್ಗೆಯೇ ಮಾತನಾಡುತ್ತಿರುವುದು ಸರಿಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಎಲ್ಲರಿಗೂ ಬಾಗಿಲು ತೆರೆಯಬೇಕಾಗಿದೆ ಎಂದರು.
ಜನಪರ ವಿಜ್ಞಾನ ಸಂಸ್ಕೃತಿಯನ್ನು ರೂಢಿಸಲು ಅಕಾಡೆಮಿಯು ನಾಯಕತ್ವ ವಹಿಸಿಕೊಳ್ಳಲು ಮುಂದಾಗಬೇಕು. ಸದ್ಯದಲ್ಲೇ ಮಂಡನೆಯಾಗಲಿರುವ ಬಜೆಟ್ಟಿನಲ್ಲಿ ಮುಂಚೂಣಿ ತಂತ್ರಜ್ಞಾನಾಧಾರಿತ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುನ್ನೆಲೆಗೆ ತರುವ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ನಿರ್ದೇಶಕ ಬಸವರಾಜು, ಅಕಾಡೆಮಿ ಅಧ್ಯಕ್ಷ ಎಸ್.ಅಯ್ಯಪ್ಪನ್ ಮುಂತಾದವರಿದ್ದರು. ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಡಾ.ವಿಜಯರಾಘವನ್ ಮತ್ತು ಸುಧಾ ಮೂರ್ತಿ ವರ್ಚುಯಲ್ ಆಗಿ ರೂಪದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ವಿವಿಧ ಪ್ರಕಟಣೆಗಳನ್ನು ಕೂಡ ಬಿಡುಗಡೆ ಮಾಡಲಾಯಿತು.
ಅಕಾಡೆಮಿ ಫೆಲೋಶಿಪ್ ಪುರಸ್ಕೃತರ ವಿವರ
ಡಾ.ಎಚ್.ಎಸ್.ನಾಗರಾಜು (ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆ), ಪ್ರಶಾಂತ್ ಪ್ರಕಾಶ್ (ಕೃಷಿಕಲ್ಪ), ಕೆ.ವಿ.ದೇವರಾಜ್ (ನಿವೃತ್ತ ಕುಲಪತಿ, ಬೆಂಗಳೂರು ಕೃಷಿ ವಿವಿ), ಡಾ.ಬಿ.ಎನ್. ಗಂಗಾಧರ್ (ನಿವೃತ್ತ ನಿರ್ದೇಶಕರು, ನಿಮ್ಹಾನ್ಸ್), ಎಚ್.ಶೇಖರ ಶೆಟ್ಟಿ (ಗೌರವ ಪ್ರಾಧ್ಯಾಪಕರು, ಮೈಸೂರು ವಿವಿ), ಎಲ್.ಎಂ.ಪಟ್ಟನಾಯಕ್ (ನಿಯಾಸ್, ಬೆಂಗಳೂರು), ಪಿ.ವೆಂಕಟರಾಮಯ್ಯ (ನಿವೃತ್ತ ಕುಲಪತಿ, ಕುವೆಂಪು ವಿವಿ), ಸಿ.ಡಿ.ಪಾಟೀಲ್ (ರಾಯಚೂರು ವಿಜ್ಞಾನ ಕೇಂದ್ರ), ವಿ.ಜಯರಾಮನ್ (ಇಸ್ರೋ), ಕೆ.ಆರ್.ಶಿವಣ್ಣ (ಎ-ಟ್ರೀ, ಬೆಂಗಳೂರು), ವಿ.ಶುಭಾ (ನಿವೃತ್ತ ವಿಜ್ಞಾನಿ, ಎನ್ಎಎಲ್, ಬೆಂಗಳೂರು), ಆರ್.ರಾಘವೇಂದ್ರ ರಾವ್ (ನಿವೃತ್ತ ವಿಜ್ಞಾನಿ, ಸಿಐಎಂಎಪಿ, ಬೆಂಗಳೂರು), ಗೈತು ಹನಸ್ (ಟಿಐಎಫ್ಆರ್, ಬೆಂಗಳೂರು), ಪಿ.ಜಿ.ಚೆಂಗಪ್ಪ (ನಿವೃತ್ತ ಕುಲಪತಿ, ಬೆಂಗಳೂರು ಕೃಷಿ ವಿವಿ), ಕೆ. ನಾರಾಯಣ ಗೌಡ (ನಿವೃತ್ತ ಕುಲಪತಿ, ಬೆಂಗಳೂರು ಕೃಷಿ ವಿವಿ), ಎಸ್.ರಾಜೇಂದ್ರ ಪ್ರಸಾದ್ (ಕುಲಪತಿ, ಬೆಂಗಳೂರು ಕೃಷಿ ವಿವಿ), ಎಂ.ಬಿ.ಚೆಟ್ಟಿ (ಉಪಕುಲಪತಿ, ಧಾರವಾಡ ಕೃಷಿ ವಿವಿ), ವೈ.ಎಸ್.ಸಿದ್ಧೇಗೌಡ (ಕುಲಪತಿ, ತುಮಕೂರು ವಿವಿ), ಎಸ್.ರವಿಚಂದ್ರ ರೆಡ್ಡಿ (ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿವಿ), ಬಿ.ಎಸ್.ಕಿರಣಗಿ (ಮಂಗಳೂರು ವಿವಿ), ಎಸ್.ಕೃಷ್ಣಪ್ರಸಾದ್, ನ್ಯಾನೋ ವಿಜ್ಞಾನ ಕೇಂದ್ರ, ಬೆಂಗಳೂರು), ಬಿ.ಮಹಾಬಲೇಶ್ವರ (ಬೆಂಗಳೂರು ವಿವಿ), ಎಸ್.ಎನ್.ಹೆಗಡೆ (ನಿವೃತ್ತ ಕುಲಪತಿ, ಬೆಂಗಳೂರು ವಿವಿ), ಕೆ.ಬಿ ಗುಡಾಸಿ (ಕುಲಪತಿ, ಕರ್ನಾಟಕ ವಿವಿ), ಆರ್.ಎಸ್.ಮುಧೋಳ (ಕುಲಪತಿ, ಬಿಎಲ್ ಡಿಇ, ವಿಜಯಪುರ), ಸಿ.ವಾಸುದೇವಪ್ಪ (ಕುಲಪತಿ, ಎನ್ಐಎಫ್ಟಿ, ಹರಿಯಾಣ), ಪಿ.ಚಂದ್ರಶೇಖರ (ಮ್ಯಾನೇಜ್, ಹೈದರಾಬಾದ್). ನಾಗೇಂದ್ರನ್ (ಅಣ್ಣಾ ವಿವಿ, ತಮಿಳುನಾಡು), ಉದಯಶಂಕರ ಪುರಾಣಿಕ (ಅಟಲ್ ಇನ್ನೋವೇಶನ್ ಮಿಶನ್, ಬೆಂಗಳೂರು), ಐ.ಎಸ್. ಶಿವಕುಮಾರ್ (ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿವಿ), ಗಣೇಶರಾಜ್ (ಇಸ್ರೋ), ಕೆ.ಪಿ.ರಮೇಶ (ಎನ್ಡಿಆರ್ಐ, ಬೆಂಗಳೂರು), ಕರಬಾ ನಟರಾಜ. (ಜಿಕೆವಿಕೆ, ಬೆಂಗಳೂರು), ಎಸ್.ಚಂದ್ರ ನಾಯಕ (ಮೈಸೂರು ವಿವಿ), ಎಸ್.ಆರ್. ಇನಾಂದಾರ (ಕರ್ನಾಟಕ ವಿವಿ, ಧಾರವಾಡ), ಲಕ್ಷ್ಮೀ ಇನಾಂದಾರ್ (ಕರ್ನಾಟಕ ವಿವಿ), ಚಿದಾನಂದ ಮನ್ಸೂರ್ (ಧಾರವಾಡ ಕೃಷಿ ವಿವಿ), ಪಿ.ಎಂ.ಪಾಟೀಲ್ (ಕರ್ನಾಟಕ ವಿವಿ), ವಸಂತಕುಮಾರ ತಿಮಕಾಪುರ (ಗ್ರೀನ್ ಲೈಫ್ ಟೆಕ್ನಾಲಜೀಸ್, ಮೈಸೂರು), ಮುರಳಿಮೋಹನ ಚೂಂತಾರು (ಮಂಜೇಶ್ವರ) ಮತ್ತು ಕಲ್ಯಾಣಿ ರಾಜು (ಕೋಲಾರ).
———
key words : science-technology-award-Bangalore
ENGLISH SUMMARY :
Dr.B.M.Hegde, Kiran Majumdar Shaw. Anantaramu among recipients; Lifetime achievement award presented for scientific achievers
Bengaluru: Well known doctor Dr.B.M.Hegde and Science Writer T.R.Anantaramu were presented ‘CNR Rao Lifetime Achievement Award’ along with gold medal by Karnataka Science and Technology Academy for the year 2021 on Tuesday. Dr.Iddya Karunasagar of University of Nitte was rewarded the ‘Lifetime Achievement Award’.
Dr.C.N.Ashwatha Narayana, Minister for Science & Technology, presented the awards in a function held at GKVK campus. More than 40 scientific achievers including K.Vijayaraghavan, Scientific advisor to Prime Minister, entrepreneur Kiran Majumdar Shaw, writer Sudha Murty, Prof.Hemantakumar, VC, University of Mysuru, Dayananda Agasar, VC, University of Gulbarga, Tessy Thomas, DRDO were presented with fellowship of the academy.
Minister Narayana, who spoke on the occasion said, it is of no use from science if the results of decisive researches does not reach out to the larger public. The doors of science and technology should be open to all, he opined.
The Science and Technology Academy should take the leading role in creating a people centric scientific culture, he pointed out. Further, he told that several programmes to be taken up in public and private collaboration will be announced in the upcoming state budget.
Dr.Vijayaraghavan and Sudha Murty virtually addressed the gathering. Several publications of the academy were also released on the occasion.
D.V.Sadananda Gowda, MP, S.R.Vishwanath, MLA, S.Aiyappan, Chairperson of the Academy, Basavaraju, Member Secretary were present.