ಬೆಂಗಳೂರು,ಅಕ್ಟೋಬರ್,19,2022(www.justkannada.in): ರಾಜ್ಯದಲ್ಲಿ ವಾಹನ ಚಾಲನೆ ವೇಳೆ ಹಿಂಬದಿ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದ್ದು, ಸೀಟ್ ಬೆಲ್ಟ್ ಧರಿಸದಿದ್ದರೇ 1 ಸಾವಿರ ರೂ. ದಂಡ ವಿಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಒಂದು ವೇಳೆ ನಿಯಮ ಮೀರಿ ಸೀಟ್ ಬೆಲ್ಟ್ ಹಾಕದೆ ಪ್ರಯಾಣ ಮಾಡಿದರೆ ಪೊಲೀಸ್ ಇಲಾಖೆ 1000 ರೂ ದಂಡ ವಿಧಿಸುತ್ತದೆ. ಪೊಲೀಸ್ ಇಲಾಖೆ ದಂಡವನ್ನು 500 ರಿಂದ 1 ಸಾವಿರ ರೂಪಾಯಿಗೆ ಹೆಚ್ಚಿಸಿದೆ. ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 500ರೂ ದಂಡ ಹಾಕಲಾಗುತ್ತಿತ್ತು. ಆದರೆ ಈಗ ನಿಯಮ ಮೀರಿದವರಿಗೆ 1000 ದಂಡ ವಿಧಿಸುವಂತೆ ರಾಜ್ಯದ ಎಲ್ಲಾ ಕಮೀಷನರೇಟ್ ಮತ್ತು ಎಸ್ಪಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇಂದಿನಿಂದಲೇ ರಾಜ್ಯದಲ್ಲಿ ನಿಯಮ ಜಾರಿಗೆಯಾಗಿದೆ.
ರಾಜ್ಯ ಪೊಲೀಸ್ ಇಲಾಖೆ ಹೊಸ ನಿಯಮಗಳು: ಪ್ರಯಾಣಿಕರ ಸಂಖ್ಯೆ 8 ಮೀರದಂತೆ ಇರುವ ವಾಹನಗಳಲ್ಲಿ , ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು ಎಂದು ತಿಳಿಸಿದೆ.
Key words: Seat -belt – driving-1000 –fine-DG-IGP -Praveen Sood