ದ್ವಿತೀಯ ಪಿಯು ಪರೀಕ್ಷೆ ರದ್ಧು ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರೋಧ.

ಮೈಸೂರು,ಜುಲೈ1,2021(www.justkannada.in):  ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ಧು ಮಾಡಿದ್ದಾರೆ. ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವುದು ಏಕೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ದ್ವಿತೀಯ ಪಿಯು ಪರೀಕ್ಷೆ ರದ್ಧು ಮಾಡಿರುವಾಗ ಎಸ್ ಎಸ್ ಎಲ್ ಸಿ  ಪರೀಕ್ಷೆ ಏಕೆ..? ಪರೀಕ್ಷೆ ಬೇಡ ಎಂದು ಶಿಕ್ಷಣ ಸಚಿವರಿಗೆ ಹೇಳಿದ್ಧೆ. ಮಂತ್ರಿ ಮಂಡಲದಲ್ಲಿ ಸಮನ್ವಯತೆ ಇಲ್ಲ. ಸಚಿವ ಸುಧಾಕರ್, ಹಾಗೂ ಸುರೇಶ್ ಕುಮಾರ್ ನಡುವೆ ಸಮನ್ವಯತೆ ಇಲ್ಲ ಎಂದು ಟೀಕಿಸಿದರು.

ಕೋವಿಡ್ ಲಸಿಕೆ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ.  ಲಸಿಕೆ ಇದ್ದಿದ್ಧರೆ ಜನ ಏಕೆ ಕ್ಯೂ ನಿಲ್ಲುತ್ತಿದ್ದರು ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಚಾಮರಾಜನಗರ ಆಕ್ಸಿಜನ್ ದುರಂತದಲ್ಲೂ ಸುಳ್ಳು ಹೇಳಿದ್ಧಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೂರು ಜನ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ ಎಂದು ಕಿಡಿಕಾರಿದರು.

ಬಿಎಸ್ ವೈಗೆ ಇನ್ನು ಸಿಎಂ ಆಸೆ ಹೋಗಿಲ್ಲ. ಚಾಮರಾಜನಗರಕ್ಕೆ ಹೋದರೇ ಸಿಎಂ ಸ್ಥಾನ ಕೈತಪ್ಪುವ ಆತಂಕ ಇದೆ. ಹೀಗಾಗಿ ಸಿಎಂ ಬಿಎಸ್ ವೈ ಚಾಮರಾಜನಗರಕ್ಕೆ ಹೋಗಿಲ್ಲ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

ENGLISH SUMMARY…

Former CM Siddaramaiah criticizes State Govt. decision to conduct SSLC exams while cancelling PUC exams

Mysuru, July 1, 2021 (www.justkannada.in): Former Chief Minister Siddaramaiah has questioned while the State Government has canceled PU exams, why is it conducting the SSLC exams?!
Speaking to the media persons in Mysuru today he informed that he had asked the Education Minister not to conduct SSLC exams. “There is no coordination in the cabinet, there is no coordination between Health Minister Sudhakar and Education Minister Suresh Kumar,” he said.
Continuing he also informed that the State Government has lied regarding providing COVID-19 vaccination. “If there was enough stock why would people stand in long queues?” He also said that the State Government has lied in the Oxygen accident case that took place in Chamarajanagara and also criticized for not taking any action against the mistake doers.
“B.S. Yedyurappa’s still has desires. He is also afraid of losing power if he visits Chamarajanagara. Hence, he won’t visit,” Siddaramaiah said.
Keywords: Former CM Siddaramaiah/ SSLC exams/ PUC exams/ criticizes/ State Government

Key words: second PU –exam-cancel- SSLC exam-former-CM- Siddaramaiah -Oppose