ಬೆಂಗಳೂರು,ಜು,14,2020(www.justkannada.in): ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿಯೂ ವಿದ್ಯಾರ್ಥಿನೀಯರೇ ಮೇಲುಗೈ ಸಾಧಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ಧಿಗೋಷ್ಠಿ ನಡೆಸಿ ದ್ವಿತೀಯ ಪಿಯು ಫಲಿತಾಂಶ ಬಿಡುಗಡೆ ಮಾಡಿದರು. ಈ ಬಾರಿಯೂ ವಿದ್ಯಾರ್ಥಿನೀಯರು ಮೇಲುಗೈ ಸಾಧಿಸಿದ್ದಾರೆ. ಶೇ.68.73 ರಷ್ಟು ವಿದ್ಯಾರ್ಥಿನೀಯರು ಪಾಸ್ ಆಗಿದ್ದರೇ ಶೇ. 54.77 ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಉಡುಪಿ ಮೊದಲ ಸ್ಥಾನಗಳಿಸಿದ್ದರೇ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ, ಕೊಡಗು ಮೂರನೇ ಸ್ಥಾನವನ್ನು ಗಳಿಸಿವೆ. ಕೊನೆಯ ಮೂರು ಸ್ಥಾನಗಳನ್ನು ಚಿತ್ರದುರ್ಗ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಗಳಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಇನ್ನೂ ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲೆ ಮೊದಲ ಸ್ಥಾನವನ್ನು ಪಿಯು ಫಲಿತಾಂಶದಲ್ಲಿ ಪಡೆದಿವೆ. ಮೊದಲು ಉಡುಪಿ – 90.71ರಷ್ಟು ಫಲಿತಾಂಶ ಬಂದಿದೆ. ಈ ವರ್ಷ 90.71 ರಷ್ಟು ಫಲಿತಾಂಶ ಪಡೆಯುವ ಮೂಲಕ ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಗಳಿಸಿದ್ದು ಮೂರನೇ ಸ್ಥಾನ ಕೊಡಗು ಗಳಿಸಿದೆ. ನಗರ ಪ್ರದೇಶದಲ್ಲಿ 62.60 ವಿದ್ಯಾರ್ಥಿಗಳು. ಗ್ರಾಮಾಂತರ ಪ್ರದೇಶದಲ್ಲಿ 58.99 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
Key words: Second PU- result-First place -udupi