ಬೆಂಗಳೂರು,ಜೂನ್,28,2021(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಗೆ ದಿನಾಂಕ ನಿಗದಿಯಾದ್ದು, ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆಯಲಿದೆ. ಈ ನಡುವೆ ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಜುಲೈ 2ನೇ ವಾರ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ. ಯಾರಿಗೂ ಅನ್ಯಾಯವಾಗದ ರೀತಿ ಫಲಿತಾಂಶ ಪ್ರಕಟಿಸುತ್ತೇವೆ. ಪರೀಕ್ಷೆ ಬರೆಯಲು ಇಚ್ಚಿಸುವವರಿಗೆ ಅವಕಾಶ ಕಲ್ಪಸುತ್ತೇವೆ. ಒಂದು ಮಾನದಂಡದ ಮೇಲೆ ಫಲಿತಾಂಶ ನೀಡುತ್ತೇವೆ ಎಂದು ತಿಳಿಸಿದರು ಜೂನ್ 30 ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಶಾಲೆ ಆರಂಭದ ಬಗ್ಗೆ ಟಾಸ್ಕ್ ಫೋರ್ಸ್ ರಚನೆ: ಜುಲೈ 1ರಿಂದ ಆನ್ ಲೈನ್ ಕ್ಲಾಸ್ ಆರಂಭ.
ಶಾಲೆ ಆರಂಭದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಶಾಲೆ ಆರಂಭ ಸಂಬಂಧ ಟಾಸ್ಕ್ ಫೋರ್ಸ್ ರಚಿಸುತ್ತೇವೆ. ಶಾಲೆ ಆರಂಭದ ಬಗ್ಗೆ ಟಾಸ್ಕ್ ಫೋರ್ಸ್ ಸಲಹೆ ನೀಡುತ್ತೆ. ವಿಷಯ ಪರಿಣಿತರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಇದರ ಸದಸ್ಯರಾಗಿರುತ್ತಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸ್ಥಳೀಯ ಅವಶ್ಯಕತೆ ಅನುಗುಣವಾಗಿ ಶಾಲೆ ಆರಂಭ ಮಾಡಲಾಗುತ್ತದೆ. ಮಕ್ಕಳ ಕಲಿಕೆ ನಿರಂತರವಾಗಿರಬೇಕು. ಮೌಲ್ಯಾಂಕ ಅಗತ್ಯ. ಈ ಬಗ್ಗೆ ಟಾಸ್ಕ್ ಫೋರ್ಸ್ ಸಲಹೆ ನೀಡಲಿದೆ. ಚಂದನ ವಾಹಿನಿಗಳಲ್ಲಿ ಜುಲೈ 1ರಿಂದ ಪಾಠ ಆರಂಭಿಸುತ್ತೇವೆ. ಕನ್ನಡ ಆಂಗ್ಲ ಮಾಧ್ಯಮಗಳಲ್ಲಿ ಪಾಠಗಳು ನಡೆಯಲಿವೆ. ದೀಕ್ಷಾ ಪೋರ್ಟಲ್ ನಲ್ಲಿ ಪಾಠಗಳು ಲಭ್ಯವಿದೆ. 22 ಸಾವಿರ ಇಕಂಟೆಂಟ್ ಲಭ್ಯವಿದೆ . ಚಿಕ್ಕಮಕ್ಕಳಿಗಾಗಿ ಮಕ್ಕಳ ವಾಹಿನಿ ಆರಂಭಿಸಿದ್ದೇವೆ. ಈ ಬಗ್ಗೆ ಯೂಟ್ಯೂಬ್ ನಲ್ಲಿ ವಿಡಿಯೋಗಳು ಲಭ್ಯವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಒಂದು ತಿಂಗಳ ಸೇತುಬಂಧ ಕಾರ್ಯಕ್ರಮ ಆರಂಭಿಸುತ್ತೇವೆ. ಕಳೆದ ವರ್ಷದ ವಿದ್ಯಾರ್ಥಿಗಳು ಪಾಠಗಳನ್ನ ಕಲಿತಿಲ್ಲ. ಹೀಗಾಗಿ ಬ್ರಿಡ್ಜ್ ಕೋರ್ಸ್ ಆರಂಭಿಸುತ್ಥೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
Key words: second PU- Result – July- 2nd Week – Minister- Suresh Kumar- starting -school.