ಉಡುಪಿ,ನ,6,2019(www.justkannada.in): ಬಿಜೆಪಿ ಸರ್ಕಾರ ರಕ್ಷಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ ಎನ್ನಲಾದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನಿಜಕ್ಕೂ ಜಾತ್ಯಾತೀತರಾದ್ರೆ ಬಿಜೆಪಿಗೆ ಬೆಂಬಲ ನೀಡಲ್ಲ ಎಂದು ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ಡಿ ದೇವೇಗೌಡರು ಮತ್ತು ಬಿಎಸ್ ವೈ ಮಧ್ಯೆ ಏನು ಒಳ ಒಪ್ಪಂದವಾಗಿದೆ ಗೊತ್ತಿಲ್ಲ. ಮಾತುಕತೆ ವಿಚಾರ ಹೆಚ್ ಡಿಡಿ ಮತ್ತು ಹೆಚ್ ಡಿಕೆ ಒಪ್ಪಿಕೊಂಡಿದ್ದಾರೆ. ಅವರಿಬ್ಬರ ನಡುವೆ ಮಾತುಕತೆಯಾಗಿರುವುದು ಸ್ಪಷ್ಟ. ಒಳ ಒಪ್ಪಂದದ ಷರತ್ತುಗಳು ಏನೆಂಬುದು ಗೊತ್ತಿಲ್ಲ. ನಿಜಕ್ಕೂ ಜಾತ್ಯಾತೀತರಾದ್ರೆ ಬಿಜೆಪಿ ಬೆಂಬಲಿಸಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಅವರು ಎಷ್ಟು ಜಾತ್ಯಾತೀತರು ಎಂದು ಜನರಿಗೆ ಗೊತ್ತಾಗುತ್ತದೆ. ಜೆಡಿಎಸ್ ಪಕ್ಷವೇ ಎಕ್ಸ್ ಪೋಸ್ ಆಗುತ್ತದೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕರೆ ಮಾಡಿ ಬಿಜೆಪಿ ಜತೆ ಜೆಡಿಎಸ್ ಇರಲಿದೆ. ಸರ್ಕಾರ ಬೀಳಿಸಲು ಬಿಡಲ್ಲ ಎಂದು ಅಭಯ ನೀಡಿದ್ದಾರೆಂದು ಸುದ್ದಿ ಹರಿದಾಡಿತ್ತು.
Key words: secularism – support –BJP- former CM – Siddaramaiah- JDS