ಬೆಂಗಳೂರು,ಆ,12,2020(www.justkannada.in): ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂತಹ ಕೃತ್ಯವೆಸಗಿದ ಯಾರನ್ನೂ ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಕಂದಾಯ ಸಚಿವ ಅಶೋಕ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೌಮ್ಯ ಸ್ವಭಾವದ ವ್ಯಕ್ತಿ. ಅಂತಹವರ ವಿರುದ್ದ ದೌರ್ಜನ್ಯ ನಡೆದಿದೆ. ಅವರ ಮನೆ ಸುಟ್ಟು ಕರಕಲಾಗಿದೆ. ಒಡವೆಗಳು, ಬೆಳ್ಳಿ ವಸ್ತುಗಳು ದೋಚಲಾಗಿದೆ. ವಾಹನಗಳನ್ನು ಬೆಂಕಿ ಹಚ್ಚಲಾಗಿದೆ. ಶಾಸಕರನ್ನು ಮುಗಿಸುವ ಸಂಚಿನಿಂದ ಈ ಕೃತ್ಯ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದು ಹಲವರ ಬಂಧನವಾಗಿದೆ ಎಂದು ತಿಳಿಸಿದರು.
ಬೆಂಗಳೂರನ್ನು ತಲ್ಲಣಗೊಳಿಸಿ ಜನರಲದಲಿ ಭೀತಿ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ. ಪೊಲೀಸರು ಸಮಯ ಪ್ರಜ್ಞೆ ಯಿಂದ ಮತ್ತಷ್ಟು ಅಮಾಹುತ ತಪ್ಪಿದೆ. ಶಿವಾಜಿನಗರ ಸೇರಿ ಹಲವೆಡೆ ಗಲಭೆ ನಡೆಸಲು ಸಂಚು ರೂಪಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೆ ಕೇವಲ ನಾಲ್ಕು ಗಂಟೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗೆ ಕಳಿಸುವವರೆಗೂ ಬಿಡಲ್ಲ. ಘಟನೆಯ ಹಿಂದೆ ಎಸ್ ಡಿ ಪಿ ಐ, ಪಿಎಫ್ ಐ ಭಾಗಿಯಾದ ಬಗ್ಗೆ ಮಾಹಿತಿ ಇದೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಗಲಭೆಕೋರರು ಸಮುದಾಯ ಗಳನ್ನು ಗುರುತಿಸಿ ಗಲಭೆ ನಡೆಸಿರುವುದು ಸ್ಪಷ್ಟವಾಗಿದೆ. ಶಾಸಕ ಶ್ರೀನಿವಾಸ್ ಕುಟುಂಬಕ್ಕೆ ಅಗತ್ಯ ಭದ್ರತೆ ನೀಡಲಾಗುವುದು ಎಂದು ಸಚಿವ ಆರ್.ಅಶೋಕ್ ಭರವಸೆ ನೀಡಿದರು.
Key words: security – MLA -Srinivas’ family-action -against – incident- Minister-R. Ashok.