ಮೈಸೂರು,ಜುಲೈ,13,2021(www.justkannada.in): ಶ್ಯಾಂ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ವೃಕ್ಷಾರೋಹಣ , ಮೈಸೂರಿನಲ್ಲಿ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ವೃಕ್ಷರೋಹಣಾದ ಸಂಚಾಲಕರಾದ ಗೋವಿಂದರಾಜು ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ವೃಕ್ಷರೋಹಣಾದ ಸಂಚಾಲಕ ಗೋವಿಂದರಾಜು, ಕೋವಿಡ್ 2 ಅಲೆ ಸಂಧರ್ಭದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಇದನ್ನ ಮನಗಂಡ ಭಾ.ಜ.ಪ.ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಗುರಿ ಹೊಂದಿದೆ. ಒಬ್ಬ ಮನುಷ್ಯ ನಿಗೆ ಒಂದು ದಿನಕ್ಕೆ ಏಳು ಮರಗಳ ಆಕ್ಸಿಜನ್ ಅವಶ್ಯಕತೆ ಇದೆ ವಿಜ್ಞಾನಿಗಳ ಸಲಹೆ ಹಾಗೂ ಮುಂದಿನ ಯುವ ಪೀಳಿಗೆಗೆ ಆಕ್ಸಿಜನ್ ನ ಕೊರತೆಯಾಗಬಾರದು ಈ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಒಂದು ಲಕ್ಷ ಸೀಡ್ ಬಾಲ್ ಗಳನ್ನು ಮಾಡುವ ಘಟಕವನ್ನು ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಮಾಡುತ್ತಿದ್ದಾರೆ. ನಂತರ ಅದನ್ನು ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೀಡ್ ಬಾಲ್ ಎಸೆಯುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ವೇಳೆ ರಾಜ್ಯ ಓ.ಬಿ.ಸಿ.ಅಧ್ಯಕ್ಷರಾದ ನೇ.ಲ.ನರೇಂದ್ರ ಬಾಬು, ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ ಸಿಂಹ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದರಾಜು, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ಗ್ರಾಮಾಂತರ ಅಧ್ಯಕ್ಷರಾದ ಮಂಗಳಾ ಸೋಮಶೇಖರ್,ಓ.ಬಿ.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಮತ್ತು ಇನ್ನಿತರೆ ನಾಯಕರುಗಳು ಉಪಸ್ಥಿತರಿರಲಿದ್ದಾರೆ ಎಂದು ಗೋವಿಂದರಾಜು ಮಾಹಿತಿ ನೀಡಿದರು.
ಇನ್ನು ತಯಾರು ಮಾಡಿದ ಸೀಡ್ ಬಾಲ್ ಗಳನ್ನು ಚಾಮುಂಡಿ ಬೆಟ್ಟ, ಹೆಚ್.ಡಿ.ಕೋಟೆಯ ಸುತ್ತ ಮುತ್ತಲಿನ ಕಾಡಿನ ಪ್ರದೇಶ, ಹುಣಸೂರಿನ ಕಾಡಿನ ಪ್ರದೇಶ,ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶ,ಪಿರಿಯಾಪಟ್ಟಣದ ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಸಂಖ್ಯೆಯ ರಕ್ತ ಚಂದನ, ಬೇವು, ಹೊಂಗೆ, ಗುಲ್ಮಾರು, ಕಾಡು ಬಾದಾಮಿ, ಬಿದಿರು, ನೇರಳೆ,ಹತ್ತಿ ಮುಂತಾದ ಸೀಡ್ ಬಾಲ್ ಗಳನ್ನು ಬಿಜೆಪಿ ಕಾರ್ಯಕರ್ತರು ಹಾಕಲಿದ್ದಾರೆ ಎಂದು ಗೋವಿಂದರಾಜು ತಿಳಿಸಿದರು.
ಸೀಡ್ ಬಾಲ್ ತಯಾರಿಕೆಗೆ ಸುಮಾರು ಹತ್ತು ಟನ್ ಗೋಬ್ಬರ, ಒಂದು ಲಕ್ಷ ಎಲ್ಲಾ ತಳಿಯ ಬೀಜಗಳು, ಹತ್ತು ಟನ್ ಕೆಂಪು ಮಣ್ಣು, ನಾಲ್ಕು ಟನ್ ನೀರು ಮಿಶ್ರಿತ ಕಪ್ಪು ಮಣ್ಣು ಬಳಸಲಾಗುತ್ತಿದ್ದು, ಈ ಕಾರ್ಯದಲ್ಲಿ ಸುಮಾರು ನೂರು ಜನ ಕಾರ್ಯಕರ್ತರು ತೊಡಿಗಿರುವುದು ವಿಶೇಷ ಎಂದರು.
ನಂತರ ಮಾತನಾಡಿದ ನಗರ ಅಧ್ಯಕ್ಷ ಜೋಗಿಮಂಜು ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಂಹಪಾಲು, ಅಂದರೆ ರಾಜ್ಯದಿಂದ ಆಯ್ಕೆಯಾದ ಪೈಕಿಯಲ್ಲಿ ಶೇಕಡಾ25% ರಷ್ಟು ಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ, ಅದರಲ್ಲೂ ಕೂಡ ಮಂತ್ರಿಮಂಡಲದಲ್ಲಿ 27 ಜನ ಹಿಂದುಳಿದ ವರ್ಗದವರು ಮಂತ್ರಿಗಳಾಗಿರುವುದು ನೋಡಿದರೆ ಹಿಂದುಳಿದ ವರ್ಗದಲ್ಲಿರುವ 126 ಸಮಾಜಕ್ಕೆ ಸಂದ ಗೌರವ. ಹಾಗೇಯೆ ಎಸ್ಸಿ, ಎಸ್ ಟಿ, ಯ ಸಮಾಜದವರನ್ನೂ 20 ಜನ ಮಂತ್ರಿ ಮಾಡಿರುವುದು ವಿಶೇಷ ಅದರಲ್ಲೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಗರ ಓ.ಬಿ.ಸಿ.ಘಟಕ ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷರಾದ ಪರಶುರಾಮಪ್ಪ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮೈ.ಪು.ರಾಜೇಶ್,ಉಮೇಶ್, ರಾಜ್ಯ ಒ.ಬಿ.ಸಿ.ಸೋಶಿಯಲ್ ಮೀಡಿಯಾ ಸಹ ಸಂಚಾಲಕ ಸು.ಮುರುಳಿ ಉಪಸ್ಥಿತಿರಿದ್ದರು.
Key words: Seedballing -program – Mysore-BJP-Govindaraju.