ಬೆಂಗಳೂರು,ಫೆಬ್ರವರಿ,3,2021(www.justkannada.in): ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಕರ್ನಾಟಕ ವಿಭಾಗದ ನೂತನ ಅಧ್ಯಕ್ಷರಾಗಿ ಆರ್ಕಿಟೆಕ್ಟ್ ಮೋಹನ್ ಬಿ ಆರ್ ಆಯ್ಕೆಯಾಗಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಸ್ಟ್ (ಐಐಎ), ಆರ್ಕಿಟೆಕ್ಟ್ ಗಳ ರಾಷ್ಟ್ರೀಯ ಸಂಸ್ಥೆಯಾಗಿದೆ. ಇದು 1917 ರಲ್ಲಿ ಸ್ಥಾಪನೆಯಾಗಿದೆ. ಮುಖ್ಯವಾಗಿ ಇದು ಆರ್ಕಿಟೆಕ್ಟ್ ಗಳ ವೃತ್ತಿಯಲ್ಲಿ ಅನುಸರಿಸುವ ಪದ್ದತಿ ಮತ್ತು ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಐಐಎ ಕರ್ನಾಟಕದ 2020-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಘೋಷಿಸುತ್ತಿದೆ.
ಆರ್ಕಿಟೆಕ್ಟ್ ಮೋಹನ್ ಬಿ ಆರ್ ಅವರು ಕರ್ನಾಟಕ ವಿಭಾಗದಲ್ಲಿ ಅವರು ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನ ಅನುಭವವುಳ್ಳ ಹಿರಿಯರಾಗಿರುವ ಅವರು, ಈ ಹಿಂದಿನ ಅಧ್ಯಕ್ಷರಾಗಿದ್ದ ಲೀನಾ ಕುಮಾರ್ ಅವರಿಂದ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾಗಿ ಮಹೇಶ್ ಹಿರೇಮಠ್, ಖಜಾಂಚಿಯಾಗಿ ಹಾರೋನ್ ಸಲೀಂ, ಜಂಟಿ ಕಾರ್ಯದರ್ಶಿಗಳಾಗಿ ಸೋಮಶೇಖರ್ ಧೋತ್ರದ್, ಶ್ರೀನಾಥ್ ತಂದೂರ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಮೋಹನ್ ಬಿ ಆರ್, ಮುಂದಿನ ಎರಡು ವರ್ಷಗಳವರೆಗೆ ನಮ್ಮ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಯಲು ಮತ್ತು ಪರಿಹಾರ ಕಂಡು ಕೊಳ್ಳಲು ಆದ್ಯತೆ ನೀಡಲಾಗುವುದು ಎಂದರು.
ನಮ್ಮ ಪಟ್ಟಣಗಳು ಮತ್ತು ನಗರಗಳು ತ್ವರಿತಗತಿಯಲ್ಲಿ, ಆತಂಕಕಾರಿಯಾಗಿ ಬೆಳೆಯುತ್ತಿರುವುದನ್ನು ನೋಡುತ್ತಿದ್ದೇವೆ. ಇದು ನಿಜಕ್ಕೂ ಭವಿಷ್ಯದಲ್ಲಿ ಬೆಳವಣಿಗೆ ಕುಂಠಿತವಾಗಲು ಕಾರಣರಾಗಿದೆ, ಇದನ್ನೇ ನಮ್ಮ ಭವಿಷ್ಯದ ತಲೆಮಾರಿಗೆ ಬಿಡಬೇಕೆ ? ಎಂದು ಪ್ರಶ್ನಿಸಿದ ಅವರು, ನಾವು ರಚನಾತ್ಮಕವಾದ ಅಭಿವೃದ್ದಿಗೆ ತೊಡಗಿಸದಿದ್ದರೆ, ಪರಿಣಾಮಕಾರಿಯಾದ ಕೊಡುಗೆ ನೀಡದಿದ್ದರೆ ಆರ್ಕಿಟೆಕ್ಟ್ ಗಳಾಗಿ ವಿಫಲರಾದಂತೆ ಆಗುತ್ತದೆ.
ಆದುದ್ದರಿಂದ, ರಚನಾತ್ಮಕವಾಗಿ ನಮ್ಮ ಒಗ್ಗಟ್ಟು ಪ್ರದರ್ಶಿಸಿ, ನಗರ ಮತ್ತು ಗ್ರಾಮೀಣ ಅಭಿವೃದ್ದಿಗೆ ಸಮರ್ಪಕವಾಗಿ ನಮ್ಮ ಸೇವೆಯನ್ನು ವಿಸ್ತರಿಸಲು ಸರ್ಕಾರವನ್ನು ಸಂಪರ್ಕಿಸಿ ನಿವೇದನೆ ಮಾಡಲು ನಿರ್ಧರಿಸಿದ್ದೇವೆ. ಪಟ್ಟಣಗಳು ಮತ್ತು ನಗರಗಳು ಮಾತ್ರವಲ್ಲ, ಗ್ರಾಮೀಣಾಭಿವೃದ್ದಿಯೂ ಆಗಬೇಕೆಂದು ಆಶಿಸುತ್ತೇವೆ ಎಂದರು.
Key words: Selected -Architect -Mohan BR -IIA Karnataka- President