ಮೈಸೂರು,ಏಪ್ರಿಲ್,02,2021(www.justkananda.in) : ಮೈಸೂರಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಾಹನ ಸವಾರರಿಂದ ಜನಸ್ನೇಹಿ ಪೋಲೀಸರ ಕಾರ್ಯಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಳಿಗ್ಗೆ 10ರಿಂದ 7ಗಂಟೆವರೆಗೆ ಈ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗಿದ್ದು, ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣ ಪಣ ತೊಟ್ಟಿದ್ದಾರೆ.
ಒಟ್ಟು 78ಪ್ರಕರಣಗಳಿಗೆ ನೆನ್ನೆ ಒಂದೇ ದಿನ 10ಕೇಂದ್ರಗಳಲ್ಲಿ 59.700ರೂ ದಂಡವನ್ನು ವಾಹನ ಸವಾರರು ಪಾವತಿಸಿದ್ದಾರೆ. ಬಾಕಿ ಇರುವ ಹಳೆ ಪ್ರಕರಣ ಮಾಹಿತಿ ಪಡೆದು ದಂಡ ಪಾವತಿಗೆ ಸಾರ್ವಜನಿಕರು ಮುಂದಾಗಿದ್ದಾರೆ. ಮೈಸೂರು ನಗರ ಸಂಚಾರಿ ಪೊಲೀಸರು ಜನರಸ್ನೇಹಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
key words : Self-motivated-Inspection-centers-Good Response-day-59.700- Fine-Collection