“ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಲಾರೆ” : ಶಾಸಕ ಶ್ರೀನಿವಾಸ್…!

ಬೆಂಗಳೂರು,ಜನವರಿ,07,2021(www.justkannada.in) : ಜೆಡಿಎಸ್ನಲ್ಲಿ ನನ್ನ ಸ್ವಾಭಿಮಾನಕ್ಕೆ ಇದುವರೆಗೂ ಧಕ್ಕೆಯಾಗಿಲ್ಲ. ಒಂದು ವೇಳೆ ಧಕ್ಕೆಯಾದರೆ ಸಹಿಸಲಾರೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.jk-logo-justkannada-mysore

 ಯಾವ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲೂ ಇಲ್ಲ. ಪ್ರೀತಿಯಿಂದ ಹೇಳಿದರೆ ಮಾತು ಕೇಳುವೆ. ದಬ್ಬಾಳಿಕೆಯಿಂದ ಹೇಳಿದರೆ ನಾನು ಕೇಳುವುದಿಲ್ಲ. ನಮ್ಮಪ್ಪನ ಮಾತೂ ಕೂಡ ದಬ್ಬಾಳಿಕೆಯಿಂದ ಹೇಳಿದರೆ ಕೇಳುವುದಿಲ್ಲ ಎಂದಿದ್ದಾರೆ.

 

ಬ್ಯಾಂಕ್ನಲ್ಲಿ ಸಾಲ ಕೊಡಿಸುವ ವಿಚಾರಕ್ಕೆ ರಾಜಣ್ಣ ಅವರ ಮನೆಗೆ ಹೋಗಿದ್ದೆ. ಬೇರೆ ವಿಚಾರವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವು ನಾಯಕರನ್ನು ಭೇಟಿ ಮಾಡಿದ್ದೆಯಾರ ಮೇಲೂ ದ್ವೇಷ ಇಲ್ಲ, ಸತ್ಯ ಹೇಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ, ನನ್ನ ಅಪ್ಪ ಬೆಳೆಸಿದ್ದಾರೆ. ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಲ್ಲ, ಬಹಿರಂಗವಾಗಿ ಪಕ್ಷದ ನಾಯಕರ ಬಗ್ಗೆ ಮಾತನಾಡಿಲ್ಲ. ಆದರೆ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಶಾಸಕ ಕೃಷ್ಣಪ್ಪ ಅವರನ್ನು ಸೋಲಿಸಿದರು ಎಂದು ಹೇಳುತ್ತಾರೆ. ಆತ್ಮಸಾಕ್ಷಿ ಇದ್ದವರಿಗೆ ಬೇಜಾರಾಗುತ್ತದೆ ಎಂದು ತಿಳಿಸಿದ್ದಾರೆ.

key words : Self-esteem-compromised-Intolerable-Legislator-Srinivas …!