ಬೆಂಗಳೂರು, ಜುಲೈ 03, 2019 (www.justkannada.in): ಇಂದು ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಎಸ್.ಕೆ.ಭಗವಾನ್ ಜನ್ಮದಿನ.
ಜುಲೈ 3 1933ರಂದು ಜನಿಸಿದ ಇವರು ಎಪ್ಪತ್ತು ಎಂಭತ್ತರ ಶತಕದಲ್ಲಿ ಬಹಳಷ್ಟು ಚಿತ್ರಗಳನ್ನು ಕನ್ನಡಿಗರಿಗೆ ನೀಡಿದವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇಷ್ಟೇ ಅಲ್ಲದೇ ಇವರು ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಜೊತೆಗೂಡಿ ಸಿನಿಮಾ ಮಾಡುತ್ತಿದ್ದರು.
ಇದರ ಸಲುವಾಗಿ ಇವರನ್ನು ದೊರೈ-ಭಗವಾನ್ ಎಂದೇ ಕರೆಯುವವರು ಹೆಚ್ಚು. ಇವರಿಬ್ಬರೂ ಸೇರಿ ಬರೋಬ್ಬರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.